ಮುಂಬೈ, ಮಾ.8: ಡಿ.ಜೆ.ಆಲ್ಬಂ ಹಾಡುಗಳಿಗೆ ಸಂಬಂಧಿಸಿದಂತೆ ಇಲ್ಲಿನ ನೈಟ್‌ಕ್ಲಬ್‌ನಲ್ಲಿ ಕುಡಿದು ಅಸಭ್ಯವಾಗಿ ನಡೆದುಕೊಂಡು ಗಲಾಟೆ ಮಾಡಿದ ಬಾಲಿವುಡ್ ನಟ ಆದಿತ್ಯ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕ್ಲಬ್‌ನಲ್ಲಿ ಡಿಜೆ ರಿಮಿಕ್ಸ್ ಹಾಡುಗಳನ್ನು ಪ್ಲೇ ಮಾಡಲಾಗುತ್ತಿದ್ದ ಸಂದರ್ಭ ಪಾಂಚೋಲಿ ಈ ಕ್ಯಾತೆ ತೆಗೆದ. ಡಿಜೆ ಹಾಡು ನಿಲ್ಲಿಸಿ ಇಂಗ್ಲಿಷ್ ಹಾಡುಗಳನ್ನು ಹಾಕುವಂತೆ ಮ್ಯಾನೇಜರ್ ಮೇಲೆ ಗಲಾಟೆ ಮಾಡಿದ ಪಾಂಚೋಲಿ ಆ ವೇಳೆ ಕಂಠಮಟ್ಟ ಕುಡಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕೆರಳಿದ್ದ ಪಾಂಚೋಲಿಯನ್ನು ಸಮಾಧಾನ ಪಡಿಸಿ ಹೊರ ಕಳಿಸಲು ಹೋಟೆಲ್ ಕೆಲಸಗಾರರು ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಪಾಂಚೋಲಿ ಕೆಲವರನ್ನು ಥಳಿಸಿದ್ದು, ಒಬ್ಬ ಕೆಲಸಗಾರ ಗಾಯಗೊಂಡ. ಆಗ ಎಲ್ಲರೂ ಸೇರಿ ಪಾಂಚೋಲಿಯನ್ನು ಸಮೀಪದ ಭಾಭಾ ಆಸ್ಪತ್ರೆಗೆ ಅವನನ್ನು ಕರೆದೊಯ್ದು ಮದ್ಯಪಾನ ಮಾಡಿರುವ ಬಗ್ಗೆ ಸರ್ಟಿಫಿಕೇಟ್ ಮಾಡಿಸಿದರು. ನಂತರ ಅವನನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಪಾಂಚೋಲಿ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.