ಕರಾವಳಿ

ಕೂಚ್ ಬಿಹಾರ್ ಟ್ರೋಫಿ ಗೆದ್ದ ಕರ್ನಾಟಕ; ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಅಜೇಯ 404, ಸಮರ್ಥ್ ಎನ್. 55 ನಾಟ್ ಔಟ್..!

Pinterest LinkedIn Tumblr

ಶಿವಮೊಗ್ಗ: ಕರ್ನಾಟಕದ 19 ವರ್ಷದೊಳಗಿನವರ ತಂಡವು ಇದೇ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದುಕೊಂಡಿತು. ಈ ಟೂರ್ನಿಯ 79 ವರ್ಷಗಳ ಇತಿಹಾಸದಲ್ಲಿ ಕರ್ನಾಟಕ ತಂಡವು ಮೊದಲ ಬಾರಿ ಚಾಂಪಿಯನ್ ಆಗಿದೆ.

(ಸಮರ್ಥ್ ಎನ್.)

ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮುಂಬೈ ಎದುರು ನಡೆದ ಫೈನಲ್‌ ಪಂದ್ಯದಲ್ಲಿ ಆತಿಥೇಯ ತಂಡದ ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಅಜೇಯ 404 ರನ್ ಗಳಿಸಿ ಯುವರಾಜ್ ಸಿಂಗ್ ದಾಖಲೆ ಮುರಿದರು. ಇವರೊಂದಿಗೆ ಎನ್. ಸಮರ್ಥ್ (ಸಮರ್ಥ್ ನಾಗರಾಜ್) ಔಟಾಗದೇ 55 ರನ್ ಬಾರಿಸಿ ಸಾತ್ ನೀಡಿದರು.

ಡ್ರಾ ಆದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ್ದ ಆತಿಥೇಯರು ಪ್ರಶಸ್ತಿ ಮುಡಿಗೇರಿಸಿಕೊಂಡರು. 510 ರನ್‌ಗಳ ಮುನ್ನಡೆಯ ದಾಖಲೆಯನ್ನೂ ಬರೆಯಿತು.

ಪ್ರಖರ್‌ ಒಟ್ಟು 638 ಎಸೆತಗಳನ್ನು ಎದುರಿಸಿದರು. 46 ಬೌಂಡರಿ ಹಾಗೂ ಮೂರು ಸಿಕ್ಸರ್ ಹೊಡೆದರು. ತಂಡವು 8 ವಿಕೆಟ್‌ಗಳಿಗೆ 890 ರನ್‌ಗಳ ದಾಖಲೆಯ ಮೊತ್ತ ಬಾರಿಸಿತು.

ಮೊದಲ ಇನಿಂಗ್ಸ್ ನಲ್ಲಿ
ಮುಂಬೈ 113.5 ಓವರ್‌ಗಳಲ್ಲಿ 380. ಕರ್ನಾಟಕ: 223 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 890 (ಪ್ರಖರ್ ಚತುರ್ವೇದಿ ಔಟಾಗದೆ 404, ಎನ್. ಸಮರ್ಥ್ ಔಟಾಗದೆ 55) ಹಾಗೂ ಎಸ್‌.ಯು. ಕಾರ್ತಿಕ್ 50, ಹರ್ಷಿಲ್ ಧರ್ಮಾನಿ 169, ಕೆ.ಪಿ. ಕಾರ್ತಿಕೇಯ 72, ಹಾರ್ದಿಕ್ ರಾಜ್ 51 ಹೊಡೆದಿದ್ದರು.

ಭರವಸೆಯ ಆಟಗಾರ ಎನ್. ಸಮರ್ಥ್:
ಸಮರ್ಥ್ ನಾಗರಾಜ್ ಪ್ರಕರ್ ಚತುರ್ವೇದಿ ಅವರು 400ರನ್ ಹೊಡೆಯುವ ವೇಳೆ ಇನ್ನೋರ್ವ ಬ್ಯಾಟ್ಸ್‌ಮನ್ ಆಗಿ ಜೊತೆಗಿದ್ದರು. ಸಮರ್ಥ್ ಕರ್ನಾಟಕ ಅಂಡರ್-19 ತಂಡದ ಆಲ್ ರೌಂಡರ್ ಆಟಗಾರನಾಗಿದ್ದು ಉತ್ತಮ ಬೌಲರ್ ಹಾಗೂ ಭರವಸೆಯ ಆಟಗಾರ. ಈ ಪಂದ್ಯಾವಳಿಯಲ್ಲಿ 2 ವಿಕೆಟ್ ಕೂಡ ತಮ್ಮದಾಗಿಸಿಕೊಂಡರು. ಸಮರ್ಥ್ ನಾಗರಾಜ ಬಾಬು ಮತ್ತು ಸವಿತಾ ಕುಂದಾಪುರ ಅವರ ಪುತ್ರ.ಈ ಹಿಂದೆ ಅವರು 14 ರೊಳೆಗಿನ ಹಾಗೂ ಅಂಡರ್ 16 ಪಂದ್ಯದಲ್ಲಿ ಭಾಗವಹಿಸಿದ್ದರು.

ಬಹುಮಾನ: ಕರ್ನಾಟಕ ತಂಡಕ್ಕೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹಾಗೂ ಮಾಜಿ ಸಚಿವ ಡಿ.ಎಚ್‌. ಶಂಕರಮೂರ್ತಿ 30 ಲಕ್ಷ ಚೆಕ್ ಹಾಗೂ ಟ್ರೋಫಿ ವಿತರಿಸಿದರು. ರನ್ನರ್‌ ಅಪ್ ಮುಂಬೈ ತಂಡ 15 ಲಕ್ಷ ಚೆಕ್, ಟ್ರೋಫಿ ಪಡೆಯಿತು.

 

Comments are closed.