ಕ್ರೀಡೆ

ಪಬ್​ಜಿ ಗೇಮ್​ಗೆ ಪರ್ಯಾಯವಾಗಿ ಬಂದಿದ್ದ ಬಿ.ಜಿ.ಎಂ.ಐ ಗೇಮ್ ಕೂಡ ಬ್ಯಾನ್..!

Pinterest LinkedIn Tumblr

ನವದೆಹಲಿ: ಭಾರತದಲ್ಲಿ ಬಿ.ಜಿ.ಎಮ್.ಐ (BGMI) ಮೊಬೈಲ್ ಗೇಮ್ ಅನ್ನು ನಿಷೇಧಿಸಲಾಗಿದೆ. ಈ ಮುನ್ನ ಕ್ರಾಫ್ಟನ್ ಎಂಬ ಕಂಪನಿ ರೂಪಿಸಿದ್ದ ಪಬ್ ಜಿ (PUBG) ಮೊಬೈಲ್ ಗೇಮ್ ನಿಷೇಧಿಸಲಾಗಿತ್ತು.

ದಕ್ಷಿಣ ಕೊರಿಯಾದ ಗೇಮ್ ಡೆವಲಪರ್ ಕ್ರಾಫ್ಟನ್ ರೂಪಿಸಿದ್ದ BGMI ಮೊಬೈಲ್ ಗೇಮ್ ಅನ್ನು ಸಹ ನಿಷೇಧ ಮಾಡಲಾಗಿದೆ. ಆದರೆ ಸದ್ಯ ಈ ನಿಷೇಧದ ಬಗ್ಗೆ ಐಟಿ ಸಚಿವಾಲಯದಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಬಿ.ಜಿ.ಎಂ.ಐ ಗೇಮ್ ಅನ್ನು ಗೂಗಲ್ ಪ್ಲೇ (Google Play) ಸ್ಟೋರ್ ಮತ್ತು ಆಪಲ್ (Apple) ಆಪ್ ಸ್ಟೋರ್ನಿಂದ ತೆಗೆದು ಹಾಕಲಾಗಿದೆ ಎಂದು ದೃಢಪಡಿಸಲಾಗಿದೆ.

ಅಪ್ಲಿಕೇಶನ್ ಸ್ಟೋರ್ಗಳಿಂದ ಆಟವನ್ನು ತೆಗೆದುಹಾಕಲಾಗಿದ್ದರೂ, ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಈಗಾಗಲೇ ಗೇಮ್ ಇನ್ಸ್ಟಾಲ್ ಇದ್ದರೆ ಸದ್ಯ ಅನ್ನು ನೀವು ಆಡಬಹುದಾಗಿದೆ. ಭಾರತದಲ್ಲಿ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಅಪ್ಲಿಕೇಶನ್​ಗೆ ಪ್ರವೇಶವನ್ನು ನಿರ್ಬಂಧಿಸಿದ್ದೇವೆ ಎಂದು ಗೂಗಲ್ ತಿಳಿಸಿದೆ.

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ PUBG ಮೊಬೈಲ್‌ನ ಭಾರತೀಯ ಆವೃತ್ತಿಯು ಇತ್ತೀಚೆಗೆ ದೇಶದಲ್ಲಿ 100 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿತ್ತು.

 

Comments are closed.