ಅಂತರಾಷ್ಟ್ರೀಯ

ಪ್ಯಾರಾಲಿಂಪಿಕ್ಸ್’ನಲ್ಲಿ ಭಾರತಕ್ಕೆ 5ನೇ ಚಿನ್ನ: ಬ್ಯಾಡ್ಮಿಂಟನ್ ಫೈನಲ್​ನಲ್ಲಿ ಕೃಷ್ಣ ನಗರ್​ಗೆ ರೋಚಕ ಗೆಲುವು

Pinterest LinkedIn Tumblr

ಟೋಕಿಯೊ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಕೃಷ್ಣ ನಗರ್ ಅವರು ಹಾಂಕಾಂಗ್ ನ ಚುಮನ್ ಕೈ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ರಾಜಸ್ತಾನ ಮೂಲದ ಕೃಷ್ಣ ಅವರು ಪದಕ ಗೆಲ್ಲುತ್ತಿದ್ದಂತೆ ಹರ್ಷ ವ್ಯಕ್ತಪಡಿಸಿದ ಅವರ ತಂದೆ ಸುನಿಲ್ ನಗರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಇಂದು ನಮ್ಮ ಸಂತೋಷಕ್ಕೆ ಪಾರವೇ ಇಲ್ಲದಾಗಿದೆ. ಇಡೀ ದೇಶ ಅವರ ಸಾಧನೆಗೆ ಹೆಮ್ಮೆಪಡುತ್ತಿದೆ ಎಂದಿದ್ದಾರೆ.

ಅಲ್ಲದೆ ರಾಷ್ಟ್ರಪತಿ, ಪ್ರಧಾನಿ ಮೋದಿ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸೇರಿದಂತೆ ಹಲವು ಗಣ್ಯರು ಕೃಷ್ಣ ನಗರ್ ಅವರಿಗೆ ಶುಭ ಕೋರಿದ್ದಾರೆ.

ಹಾಂಕಾಂಗ್ ದೇಶದ ಚು ಮನ್ ಕೈ ಅವರನ್ನು 21-17, 16-21, 21-17 ಸೆಟ್ ಗಳಿಂದ ಕೃಷ್ಣ ನಗರ್ ಸೋಲಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ 5 ಚಿನ್ನದ ಪದಕ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳೊಂದಿಗೆ ಇದುವರೆಗೆ ಒಟ್ಟು 19 ಪದಕಗಳನ್ನು ಗೆದ್ದುಕೊಂಡು ಭಾರತ 24ನೇ ಸ್ಥಾನದಲ್ಲಿದೆ. 206 ಪದಕಗಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿ ಮತ್ತು 124 ಪದಕಗಳನ್ನು ಗಳಿಸುವ ಮೂಲಕ ಗ್ರೇಟ್ ಬ್ರಿಟನ್ ಎರಡನೇ ಸ್ಥಾನದಲ್ಲಿದೆ.

 

Comments are closed.