ಅಂತರಾಷ್ಟ್ರೀಯ

ಪ್ಯಾರಾಲಿಂಪಿಕ್ಸ್ ಶೂಟಿಂಗ್’ನಲ್ಲಿ ಅವನಿ ಲೇಖರಾಗೆ ಕಂಚು; ಒಂದೇ ಕ್ರೀಡಾಕೂಟದಲ್ಲಿ 2 ಪದಕ ಗೆದ್ದ ಮೊದಲ ಕ್ರೀಡಾಪಟು

Pinterest LinkedIn Tumblr

ಟೋಕಿಯೊ: ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಶೂಟರ್ ಅವನಿ ಲೇಖರಾ ಮತ್ತೊಂದು ಇತಿಹಾಸ ಬರೆದಿದ್ದಾರೆ.

ಇಂದು ನಡೆದ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅವನಿ ಒಂದೇ ಕೂಟದಲ್ಲಿ ಎರಡು ಪದಕ ಗೆದ್ದ ಭಾರತೀಯ ಕ್ರೀಡಾಪಟು ಎಂಬ ಸಾಧನೆ ಮಾಡಿದ್ದಾರೆ. ಮೊನ್ನೆಯಷ್ಟೇ ಅವನಿ ಲೇಖರಾ 10 ಮೀಟರ್ ಏರ್ ರೈಫಲ್ ವಿಭಾಗದ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದ್ದರು.

ಫೈನಲ್ ಪಂದ್ಯದಲ್ಲಿ ಭಾರತದ ಅವನಿ ಲೇಖರಾ ಒಟ್ಟು 445.9 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿ ಕಂಚಿನ ಪದಕ ಪಡೆದರು. ಅಂತಿಮ ಸುತ್ತು ಆರಂಭಕ್ಕೂ ಮುನ್ನ ಅವನಿ ಕೇವಲ 149.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿ ಮೂರನೇ ಸ್ಥಾನ ಪಡೆದರು.

Comments are closed.