ಕರಾವಳಿ

ಟೆಸ್ಟ್‌ : ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾಕ್ಕೆ ಭಾರೀ ಅಂತರದ ಸೋಲು

Pinterest LinkedIn Tumblr

ಚೆನ್ನೈ,ಫೆಬ್ರವರಿ.09  : ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಬಾರೀ ಅಂತರದಿಂದ ಸೋಲಿನ ಅಪಘಾತಕ್ಕೆ ಒಳಗಾಗಿದೆ. ಸರಣಿಯ ಮೊದಲ ಪಂದ್ಯವನ್ನು ಬರೋಬ್ಬರಿ 227 ರನ್‌ ಅಂತರದಿಂದ ಸೋತಿದೆ.

ಇಂಗ್ಲೆಂಡ್‌ ವಿರುದ್ಧ ಚೈನೈನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಅದರದ್ದೇ ನೆಲದಲ್ಲಿ 2-1 ಅಂತರದಿಂದ ಮಣಿಸಿ ಐಸಿಹಾಸಿಕ ದಾಖಲೆ ಬರೆದಿದ್ದ ಭಾರತ ಕ್ರಿಕೆಟ್‌ ತಂಡ ಇದೀಗ ತವರಿನಲ್ಲಿ ಮುಖಭಂಗ ಅನುಭವಿಸಿದೆ.

ಚೈನೈಯ ಚಿದಂಬರಂ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಪ್ರವಾಸಿ‌ ಪಡೆ ನಾಯಕ ಜೋ ರೂಟ್‌ ತಮ್ಮ ನೂರನೇ ಟೆಸ್ಟ್‌ ಪಂದ್ಯದಲ್ಲ ಗಳಿಸಿದ ದಾಖಲೆಯ ದ್ವಿಶತಕದ (218) ರನ್ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 578 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು.

ಇದಕ್ಕುತ್ತರವಾಗಿ ವಿರಾಟ್‌ ಕೊಹ್ಲಿ ಪಡೆ ಗಳಿಸಿದ್ದು, ಕೇವಲ 337 ರನ್‌ ಮಾತ್ರ. ಹೀಗಾಗಿ ಟೀಂ ಫಾಲೋಆನ್‌ನಲ್ಲಿ ಸಿಲುಕಿತ್ತು. ಆದರೆ ಫಾಲೋಆನ್‌ ಹೇರದೆ ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಪಡೆಗೆ ಅಶ್ವಿನ್‌ ಆಘಾತ ನೀಡಿದರು. 61 ರನ್‌ ನೀಡಿ ಪ್ರಮುಖ ಆರು ವಿಕೆಟ್‌ಗಳನ್ನು ಉರುಳಿಸಿದರು. ನದೀಂ ಎರಡು, ಜಸ್‌ಪ್ರೀತ್‌ ಬೂಮ್ರಾ ಮತ್ತು ಇಶಾಂತ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು. ಹೀಗಾಗಿ ಆಂಗ್ಲ ಪಡೆ 178 ರನ್‌ಗಳಿಗೆ ಸರ್ವಪತನ ಕಂಡಿತು.

ಸವಾಲಿನ ಗುರಿ ಎದುರು ನಾಲ್ಕನೇ ದಿನದ ಅಂತಿಮ ಅವಧಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 6 ರನ್‌ ಗಳಿಸಿದ್ದ ರೋಹಿತ್‌ ಎರಡನೇ ಇನಿಂಗ್ಸ್‌ನಲ್ಲಿ ಗಳಿಸಿದ್ದು 12 ರನ್‌ ಮಾತ್ರ. ಇದು ಕೊಹ್ಲಿ ಪಡೆಗೆ ದೊಡ್ಡ ಪೆಟ್ಟು ನೀಡಿತು.

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ (72 ರನ್, 9 ಬೌಂಡರಿ) ಹಾಗೂ ಯುವ ಆಟಗಾರ ಶುಭಮನ್‌ಗಿಲ್(50ರನ್, 7 ಬೌಂಡರಿ, 1 ಸಿಕ್ಸರ್)ರ ಆಕರ್ಷಕ ಅರ್ಧಶತಕಗಳ ನೆರವಿದ್ದರೂ ಕೂಡ ಟೀಂ ಇಂಡಿಯಾ 227 ರನ್‌ಗಳಿಂದ ಸೋತು ಮುಖಭಂಗ ಅನುಭವಿಸಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 39 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡದ ಇಂದು ಪಂದ್ಯವನ್ನು ಡ್ರಾ ಮಾಡಿಕೊಡುವ ಲೆಕ್ಕಾಚಾರ ಹಾಕಿತ್ತು.

ಭಾರತ ತಂಡದ ಲೆಕ್ಕಾಚಾರ ಗಳನ್ನು ತಲೆಕೆಳಗಾಗುವಂತೆ ಬೌಲಿಂಗ್ ಮಾಡಿದ ಲೀಚ್ (4ವಿಕೆಟ್) ಹಾಗೂ ಜೇಮ್ಸ್ ಅಂಡರ್ಸನ್ (3 ವಿಕೆಟ್) ಇಂಗ್ಲೆಂಡ್ 227 ರನ್‌ಗಳ ಗೆಲುವು ತಂದುಕೊಟ್ಟರು. ಪ್ರಥಮ ಇನ್ನಿಂಗ್‌ನಲ್ಲಿ ಆಕರ್ಷಕ ದ್ವಿಶತಕ ಗಳಿಸಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಪಂದ್ಯಶ್ರೇಷ್ಠರಾದರು

ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಮುನ್ನ ಭಾರತದೆದುರು ಎರಡು ಅಯ್ಕೆಗಳಿದ್ದವು. ಮೊದಲನೇಯದು, ಬೃಹತ್‌ ಗುರಿಯನ್ನು ತಲುಪಿ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತಿಹೆಚ್ಚು ರನ್‌ ಗುರಿ ಬೆನ್ನಟ್ಟಿ ಗೆದ್ದ ದಾಖಲೆ ತನ್ನ ಹೆಸರಿಗೆ ಬರೆದುಕೊಳ್ಳುವುದು.

ಎರಡನೇಯದು, ಈಗಾಗಲೇ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ, 241 ರನ್‌ಗಳ ಹಿನ್ನಡೆಯಲ್ಲಿದ್ದ ಕಾರಣ ಈ ಬಾರಿ ವಿಕೆಟ್‌ ಕಳೆದುಕೊಳ್ಳದೆ ಎಚ್ಚರಿಕೆಯ ಆಟವಾಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು. ಆ ಮೂಲಕ ಸೋಲಿನಿಂದ ಪಾರಾಗುವುದು. ಆದರೆ, ಟೀಂ ಇಂಡಿಯಾ ಈ ಎರಡನ್ನೂ ಮಾಡದೆ ಸೋಲಿಗೆ ಶರಣಾಗಿದೆ. ಕೇವಲ 198 ರನ್‌ ಗಳಿಸಿ ಆಲೌಟ್‌ ಆಗುವುದರೊಂದಿಗೆ ಸರಣಿಯಲ್ಲಿ 0-1 ಅಂತರದ ಹಿನ್ನಡೆ ಅನುಭವಿಸಿದೆ.

ಭಾರತಕ್ಕೆ 10ನೆ ಸೋಲು: ಟೆಸ್ಟ್ ಪಂದ್ಯದಲ್ಲೇ ಅಂತಿಮ ದಿನದಲ್ಲಿ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದಾಗ ಭಾರತ ತಂಡವು ಇದಗುವರೆಗೂ 11 ಪಂದ್ಯಗಳಲ್ಲಿ 9ರಲ್ಲಿ ಸೋಲು ಕಂಡು 2ರಲ್ಲಿ ಡ್ರಾ ಮಾಡಿಕೊಂಡಿದ್ದರು. ಇಂದಿನ ಪಂದ್ಯವನ್ನು ಸೋಲುವ ಮೂಲಕ ಟೀಂ ಇಂಡಿಯಾವು ಬೃಹತ್ ಗುರಿಯನ್ನು ಬೆನ್ನಟ್ಟಿದಾಗ ಪಂದ್ಯಗಳಲ್ಲಿ 11 ಪಂದ್ಯಗಳಲ್ಲಿ ಸೋಲು ಕಂಡಂತಾಗಿದೆ.

Comments are closed.