ಕರಾವಳಿ

ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಟೀಮ್​ ಇಂಡಿಯಾ

Pinterest LinkedIn Tumblr

ಬ್ರಿಸ್ಬೇನ್: ಇಲ್ಲಿನ ಗಾಬಾ ಮೈದಾನದಲ್ಲಿ ನಡೆದ 4ನೇ ಟೆಸ್ಟ್​ ಪಂದ್ಯದ ಅಂತಿಮ ದಿನದಾಟದಲ್ಲಿ ಟೀಮ್​ ಇಂಡಿಯಾ 3 ವಿಕೆಟ್​ಗಳ ಅಂತರದಿಂದ ಜಯ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.

ರಿಷಬ್ ಪಂತ್ ಅದ್ಭುತವಾದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾವು ಮೂರು ವಿಕೆಟ್ ಗೆಲುವು ದಾಖಲಿಸಿಕೊಂಡಿದೆ.

ರಿಷಬ್ ಪಂತ್ 89 ರನ್ ಮಾಡಿ ಟೀಂ ಇಂಡಿಯಾವು 329 ರನ್ ಮಾಡಿ ಗೆಲುವು ದಾಖಲಿಸಿ 2-1ರಿಂದ ನಾಲ್ಕು ಪಂದ್ಯಗಳ ಸರಣಿಯನ್ನು ಗೆಲ್ಲಲು ನೆರವಾದರು.

ರಿಷಬ್ ಪಂತ್ 9 ಬೌಂಡರಿ 1 ಸಿಕ್ಸರ್ ನ್ನು 138 ಎಸೆತಗಳಲ್ಲಿ ಬಾರಿಸಿದರೆ, ವಾಷಿಂಗ್ಟನ್ ಸುಂದರ್ 22 ರನ್ ಮಾಡಿ ಅಂತ್ಯದಲ್ಲಿ ಉತ್ತಮ ಜತೆ ನೀಡಿದರು. ಚೇತೇಶ್ವರ್ ಪೂಜಾರ(56) ರಹಾನೆ 24 ಮತ್ತು ಸುಭ್ಮನ್ ಗಿಲ್ 91 ರನ್ ಮಾಡಿ ತಂಡಕ್ಕೆ ನೆರವಾದರು.

ಸೋಮವಾರದ ಅಂತ್ಯಕ್ಕೆ ಪ್ರಮುಖ ಬೌಲರ್‌ಗಳ ಗೈರಿನಲ್ಲಿ ವೇಗಿಗಳಾದ ಮೊಹಮದ್ ಸಿರಾಜ್ (73ಕ್ಕೆ 5) ಮತ್ತು ಶಾರ್ದೂಲ್ ಠಾಕೂರ್ (61ಕ್ಕೆ 4) ತೋರಿದ ಕೆಚ್ಚೆದೆಯ ಬೌಲಿಂಗ್ ನಿರ್ವಹಣೆಯ ನೆರವಿನಿಂದ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಕಡಿವಾಣ ಹೇರಿ, ಗೆಲುವಿಗೆ 328 ರನ್‌ಗಳ ಸವಾಲಿನ ಗುರಿ ಪಡೆದಿತ್ತು.

ನಾಲ್ಕನೇ ದಿನದಾಟದಲ್ಲಿ ಭಾರತದ ಚೇಸಿಂಗ್‌ಗೆ ಮಳೆ ಅಡಚಣೆ ಬಂದಿತ್ತು. ಅಂತಿಮ ದಿನವೂ ಮಳೆ ಕಾಡುವ ಭೀತಿ ಇತ್ತು. ಇದರಿಂದಾಗಿ ಸೋಲು-ಗೆಲುವಿಗಿಂತ ಪಂದ್ಯ ಡ್ರಾಗೊಳ್ಳುವ ಸಾಧ್ಯತೆಯೇ ಹೆಚ್ಚಾಗಿತ್ತು. ಆದರೆ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ ಟೀಮ್​ ಇಂಡಿಯಾದ ಯುವಪಡೆ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಮಾತ್ರವಲ್ಲದೇ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

ನಾಲು ಸರಣಿಯ ಪಂದ್ಯದಲ್ಲಿ ಮೊದಲ ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯಾ ತಂಡ ಗೆದ್ದಿದೆ. ಎರಡನೇಯ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದಿದೆ. ಮೂರನೇ ಪಂದ್ಯವನ್ನು ಬಾಲಗೊಂಚಿಲುಗಳ ಅಮೋಘ ಪ್ರದರ್ಶನದ ಮೂಲಕ ಡ್ರಾ ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ನಾಲ್ಕನೇ ಸರಣಿಯಲ್ಲಿ ಪಂದ್ಯ ಗೆಲ್ಲುವ ಮೂಲಕ 2-1 ಅಂತರದಿಂದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್​ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಶುಭ್​ಮನ್​ ಗಿಲ್​ (91), ಚೇತೇಶ್ವರ ಪೂಜಾರ (56) ಹಾಗೂ ರಿಷಬ್​ ಪಂತ್​ ಅಜೇಯ 89 ರನ್​ ನರವಿನಿಂದ ಎರಡನೇ ಇನ್ನಿಂಗ್ಸ್​ನಲ್ಲಿ 96 ಓವರ್​ಗೆ 7 ವಿಕೆಟ್​ ನಷ್ಟಕ್ಕೆ 329 ರನ್​ ಕಲೆಹಾಕುವ ಮೂಲಕ ಟೀಮ್​ ಇಂಡಿಯಾ ವಿಜಯೋತ್ಸವ ಆಚರಿಸಿತು. ಈ ಮೂಲಕ ಬ್ರಿಸ್ಬೇನ್​ ಟೆಸ್ಟ್​ ಇತಿಹಾಸಲ್ಲೇ ಅತಿ ಹೆಚ್ಚು ರನ್ (257)​ ಚೇಸ್​ ಮಾಡಿದ ಕೀರ್ತಿಗೆ ಭಾರತ ಪಾತ್ರವಾಗಿದೆ.

Comments are closed.