ಕ್ರೀಡೆ

ನಾವಿಬ್ಬರು ಮ್ಯಾರಥಾನ್ ಸೆಕ್ಸ್‌ನಲ್ಲಿ ಪಾಲ್ಗೊಂಡಿರುವುದೇ ವಾರ್ನರ್ ಗಾಯಕ್ಕೆ ಕಾರಣ: ಪತ್ನಿ ಕ್ಯಾಂಡಿಸ್

Pinterest LinkedIn Tumblr


ಸಿಡ್ನಿ: ಪ್ರವಾಸಿ ಭಾರತ ವಿರುದ್ಧದ ಮೊದಲೆರಡೂ ಏಕದಿನ ಪಂದ್ಯಗಳಲ್ಲಿ ಗೆದ್ದು ಆಸ್ಟ್ರೇಲಿಯಾ ತಂಡ ತವರಿನ ಕ್ರಿಕೆಟ್ ಋತುವನ್ನು ಭರ್ಜರಿಯಾಗಿ ಆರಂಭಿಸಿದೆ. ಈ ನಡುವೆ ತಂಡದ ಪ್ರಮುಖ ಆರಂಭಿಕ ಡೇವಿಡ್ ವಾರ್ನರ್ ಗಾಯಗೊಂಡಿದ್ದಾರೆ. ಇದಕ್ಕೆ ತಾನೂ ಕಾರಣ ಎಂದು ಅವರ ಪತ್ನಿ ಕ್ಯಾಂಡಿಸ್ ವಾರ್ನರ್ ಹೇಳಿದ್ದಾರೆ.

ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ವಾರ್ನರ್ ತೊಡೆಸಂದು ಗಾಯಕ್ಕೊಳಗಾಗಿದ್ದರು. ಪಂದ್ಯಕ್ಕೆ ಮುನ್ನ ನಾವಿಬ್ಬರು ಮ್ಯಾರಥಾನ್ ಸೆಕ್ಸ್‌ನಲ್ಲಿ ಪಾಲ್ಗೊಂಡಿರುವುದೇ ವಾರ್ನರ್ ಗಾಯಕ್ಕೆ ಕಾರಣವಾಗಿರಬಹುದು ಎಂದು ಕ್ಯಾಂಡಿಸ್ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಆಸ್ಟ್ರೇಲಿಯಾದ ಕ್ಷಮೆಯನ್ನೂ ಯಾಚಿಸಿದ್ದಾರೆ.

ವಾರ್ನರ್ ಗಾಯದ ಸಮಸ್ಯೆಯ ಬಗ್ಗೆ ಮಾಧ್ಯಮವೊಂದರ ಜತೆಗೆ ಮಾತನಾಡಿರುವ ಕ್ಯಾಂಡಿಸ್, ‘ನಾವಿಬ್ಬರು ಸುಮಾರು 4 ತಿಂಗಳ ಬಳಿಕ ಒಂದಾಗಿದ್ದೆವು. ಹೀಗಾಗಿ ಸುದೀರ್ಘವಾದ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದೆವು. ಸಾರಿ ಆಸ್ಟ್ರೇಲಿಯಾ’ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ವಾರ್ನರ್ ಕಳೆದ ಮೂರು ತಿಂಗಳಿನಿಂದ ಐಪಿಎಲ್‌ನಿಂದ ಸನ್‌ರೈಸರ್ಸ್‌ ತಂಡದ ಜತೆಗಿದ್ದರೆ, ಅದಕ್ಕೆ ಮುನ್ನ ಆಸ್ಟ್ರೇಲಿಯಾ ತಂಡದ ಜತೆಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಹೀಗಾಗಿ ತವರಿಗೆ ಮರಳಿದ ಬೆನ್ನಲ್ಲೇ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳ ಜತೆಗೆ ಸಮಯ ಕಳೆದಿದ್ದರು.

ವಾರ್ನರ್ ಸದ್ಯ ಭಾರತ ವಿರುದ್ಧದ ಸೀಮಿತ ಓವರ್ ಸರಣಿಯಿಂದ ಹೊರಬಿದ್ದುದು ಮಾತ್ರವಲ್ಲದೆ, ಟೆಸ್ಟ್ ಸರಣಿಯ ಮೊದಲ 2 ಪಂದ್ಯಗಳಲ್ಲೂ ಆಡುವುದು ಅನುಮಾನವೆನಿಸಿದೆ.

Comments are closed.