ಲಖನೌ: ಅತ್ತಿಗೆಯೊಬ್ಬಳು ಮೈದುನನ ಸಂಬಂಧವನ್ನು ಬೇರೆಯದ್ದೇ ರೀತಿಯಲ್ಲಿ ಬಳಸಿಕೊಂಡ ಪರಿಣಾಮ ಇಬ್ಬರು ಇದೀಗ ಸ್ಮಶಾನ ಸೇರಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ.
ಗಾಜಿಪುರದ ಬ್ರಹ್ಮಾಂತರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 28 ವರ್ಷದ ಸುನಿತಾ ಆ ಮನೆಗೆ ಕೆಲವು ವರ್ಷಗಳ ಹಿಂದೆಯೇ ಸೊಸೆಯಾಗಿ ಬಂದಿದ್ದಳು. ಕುಟುಂಬದ ಮೊದಲನೇ ಸೊಸೆಯಾಗಿ ಬಂದಿದ್ದ ಆಕೆಗೆ ಮೂರು ವರ್ಷದ ಮಗ ಮತ್ತೊಬ್ಬಳು ಮೂರು ತಿಂಗಳ ಮಗಳಿದ್ದಳು. ಈ ಸುಂದರ ಕುಟುಂಬದಲ್ಲಿ ಕಲ್ಲು ಎಸೆದುಕೊಳ್ಳುವ ಕೆಲಸವನ್ನು ಅವಳು ಮಾಡಿಕೊಂಡಿದ್ದಾಳೆ.
ಗಂಡನ ಜತೆ ಅನ್ಯೋನ್ಯವಾಗಿಯೇ ಇದ್ದ ಸುನಿತಾ ಗಂಡನ ತಮ್ಮನೊಂದಿಗೆ ಸಂಪರ್ಕ ಆರಂಭಿಸಿದ್ದಾಳೆ. 22 ವರ್ಷದ ಮೈದುನನೊಂದಿಗೂ ಸಂಬಂಧ ಬೆಳೆಸಿಕೊಂಡಿದ್ದಾಳೆ. ಈ ಮಧ್ಯೆ ಆತನಿಗೆ ಮದುವೆ ಸಂಬಂಧ ಕೂಡಿಬಂದಿದೆ. 2021ರ ಮೇ 7ಕ್ಕೆ ಮದುವೆಯನ್ನು ನಿಶ್ಚಯಿಸಲಾಗಿದೆ. ಆದರೆ ಅದನ್ನು ಸಹಿಸದ ಅತ್ತಿಗೆ ಮತ್ತು ಮೈದುನ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಸದ್ಯ ಇಬ್ಬರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
Comments are closed.