ಉಡುಪಿ: ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಸದಾ ಜನಸಾಮಾನ್ಯರ ಮದ್ಯೆ ಬೆರೆತು ಕಾರ್ಯ ನಿರ್ವಹಿಸುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಯಾವಾಗಲು ಇತರ ಅಧಿಕಾರಿಗಳಿಗಿಂತಲೂ ತುಂಬಾನೇ ಡಿಫರೆಂಟ್.
ಗುರುವಾರ ಮತ್ತೆ ಅದು ಸಾಭೀತಾಗಿದ್ದು ಯುವಕರ ಜೊತೆ ಕ್ರೀಡಾಂಗಣದಲ್ಲಿ ಕ್ರಿಕೇಟ್ ಆಡಿ ಸಂಭ್ರಮಿಸಿದ್ದಾರೆ. ಸ್ವತಃ ಇದನ್ನು ಅವರ ಅಧೀಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಉಡುಪಿಯ ಜಿಲ್ಲಾಸ್ಪತ್ರೆ ಜಾಗ ವೀಕ್ಷಣೆಗೆ ತೆರಳಿ ಕರ್ತವ್ಯ ನಿರ್ವಹಣೆಯ ತರುವಾಯ ಅಲ್ಲೆ ಸಮೀಪ ಕ್ರಿಕೇಟ್ ಆಡುತ್ತಿದ್ದ ಯುವಕರ ಜೊತೆ ತಾನೂ ಕ್ರಿಕೆಟ್ ಆಡಿದ್ದಾರೆ. ಇದೇ ವೇಳೆ ಒಂದು ಬೌಂಡರಿ ಕೂಡ ಬಾರಿಸಿದ್ದಾರೆ.
ಸದ್ಯ ಈ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದು ಜಿಲ್ಲಾಧಿಕಾರಿಯವರ ಕ್ರೀಡಾ ಪ್ರೇಮದ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇನ್ನು ಕ್ರಿಕೆಟ್ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಡಿಸಿ ಜಿ. ಜಗದೀಶ್ ಈ ಹಿಂದೆ ಕರ್ತವ್ಯದಲ್ಲಿದ್ದ ವ್ಯಾಪ್ತಿಯಲ್ಲೂ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದರು.