ಕ್ರೀಡೆ

ಅನಿಲ್ ಕುಂಬ್ಳೆಗೆ 50ನೇ ಹುಟ್ಟು ಹಬ್ಬದ ಸಂಭ್ರಮ

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ಇತಿಹಾಸದ ಯಶಸ್ವಿ ಬೌಲರ್‌ ಎನಿಸಿರುವ ಅನಿಲ್‌ ಕುಂಬ್ಳೆ ಅವರಿಗೆ ಶನಿವಾರ 50ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಮಾಜಿ ಸಹ-ಆಟಗಾರರು, ಹಾಲಿ ಕ್ರಿಕೆಟಿಗರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

1970ರ ಅಕ್ಟೋಬರ್‌ 17ರಂದು ಜನಿಸಿದ ಅನಿಲ್‌ ಕುಂಬ್ಳೆ ಭಾರತ ತಂಡದ ಪರ 132 ಟೆಸ್ಟ್‌ ಮತ್ತು 271 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 619 ಮತ್ತು 337 ವಿಕೆಟ್‌ ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 900ಕ್ಕೂ ಅಧಿಕ ವಿಕೆಟ್‌ ಕಬಳಿಸಿದ ಏಕೈಕ ಬೌಲರ್‌ ಎಂಬ ಹೆಗ್ಗಳಿಕೆ ಅವರದಾಗಿದೆ.

“ಹ್ಯಾಪಿ ಬರ್ತ್‌ಡೇ ಅನಿಲ್ ನಿಮ್ಮ ಭವಿಷ್ಯದ ಎಲ್ಲ ಯೋಜನೆಗಳಿಗೆ ಶುಭ ಹಾರೈಕೆಗಳು. ಶೀಘ್ರದಲ್ಲಿಯೇ ಮತ್ತೆ ಭೇಟಿಯಾಗೋಣ’ ಎಂದು ಸಚಿನ್‌ ತೆಂಡುಲ್ಕರ್‌ ಟ್ವೀಟ್‌ ಮೂಲಕ ಶುಭಾಶಯ ತಿಳಿಸಿದ್ದಾರೆ. “ಇನಿಂಗ್ಸ್‌ ಒಂದರ ಎಲ್ಲ 10 ವಿಕೆಟ್‌ ಕಬಳಿಸಿದ್ದರಿಂದ, ತಲೆಗೆ ಬ್ಯಾಂಡೇಜ್‌ ಸುತ್ತಿಕೊಂಡು ಆಡಿದ್ದರವರೆಗೆ ಭಾರತ ಕಂಡ ಅತ್ಯುತ್ತಮ ಮ್ಯಾಚ್‌ ವಿನ್ನರ್‌ಗೆ ಜನ್ಮದಿನದ ಶುಭಾಶಯಗಳು’ ಎಂದು ಗೌತಮ್‌ ಗಂಭೀರ್‌ಸೇರಿದಂತೆ ಹಲವರು ಕುಂಬ್ಳೆಗೆ ಶುಭಾಶಯ ಕೋರಿ ಹಾರೈಸಿದ್ದಾರೆ.

Comments are closed.