ಮನೋರಂಜನೆ

ಸುಖ-ಸಂಸಾರದ ರಹಸ್ಯ ಹೇಳಿದ ಬಾಲಿವುಡ್ ನಟಿ ಕರೀನ್ ಕಪೂರ್

Pinterest LinkedIn Tumblr


ನವದೆಹಲಿ: ನಟಿ ಕರೀನ್ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ವಿವಾಹ ಎಂಟು ವರ್ಷಗಳನ್ನು ಪೂರೈಸಿದೆ.

ಸೈಫ್ ಮತ್ತು ಕರೀನಾ 16 ಅಕ್ಟೋಬರ್ 2012ರಂದು ವಿವಾಹವಾದರು. ಈ ಸಂದರ್ಭದಲ್ಲಿ ಬೇಗಂ ಕರೀನಾ ಕಪೂರ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಮುದ್ದಾದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಕಿರಿಯ ನವಾಬ್ ಸೈಫ್ ಅಲಿ ಖಾನ್ (Saif Ali Khan) ಅವರಿಗೆ ಶುಭ ಹಾರೈಸಿದರು.

ಕರೀನಾ ಕಪೂರ್ ಖಾನ್ (Kareena Kapoor Khan) ಫೋಟೋ ಹಂಚಿಕೊಳ್ಳುವಾಗ, ಒಂದು ಕಾಲದಲ್ಲಿ, ಬೆಬೊ ಎಂಬ ಹುಡುಗಿ ಮತ್ತು ಸೈಫು ಎಂಬ ಹುಡುಗ ಇದ್ದರು. ಇಬ್ಬರೂ ಸ್ಪಾಗೆಟ್ಟಿ ಮತ್ತು ವೈನ್ ಅನ್ನು ಇಷ್ಟಪಟ್ಟರು … ಮತ್ತು ಇಬ್ಬರೂ ಸಂತೋಷದಿಂದ ಬದುಕಲು ಪ್ರಾರಂಭಿಸಿದರು ಎಂಬ ಮಧುರವಾದ ಸಾಲುಗಳನ್ನು ಕರೀನಾ ಅವರು ಫೋಟೋದೊಂದಿಗಿನ ಶೀರ್ಷಿಕೆಯೊಂದಿಗೆ ಬರೆದಿದ್ದಾರೆ.

ಈಗ ನಿಮಗೆ ಸುಖ ಸಂಸಾರದ ರಹಸ್ಯ ತಿಳಿದಿದೆ ಎಂದು ಹೇಳಿ ಕರೀನಾ ತಮ್ಮ ಪತಿ ಸೈಫ್ ಅಲಿ ಖಾನ್ ಅವರರಿಗೆ ಸ್ಮೈಲೀಸ್ ಜೊತೆಗೆ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

ಕರೀನಾ ಕಪೂರ್ ಖಾನ್ ಸೈಫ್ ಗಿಂತ ಹತ್ತು ವರ್ಷ ಚಿಕ್ಕವರು. ಇಬ್ಬರ ವಿವಾಹದ ಬಗ್ಗೆ ಸಾಕಷ್ಟು ವಿವಾದಗಳು ಕೇಳಿಬಂದವು. ಅವೆಲ್ಲದರ ಮಧ್ಯೆ ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್ ಜೋಡಿ ವಿವಾಹವಾಗಿ ಯಶಸ್ವೀ ದಾಂಪತ್ಯ ಜೀವನ ಸಾಗಿಸುತ್ತಿದೆ. 2016ರಲ್ಲಿ ಕರೀನಾ ತನ್ನ ಮೊದಲ ಮಗು ತೈಮೂರ್ ಅಲಿ ಖಾನ್ ಗೆ ಜನ್ಮ ನೀಡಿದರು. ಇತ್ತೀಚೆಗೆ ಕರೀನಾ ಕಪೂರ್ ಖಾನ್ ಅವರು ಮತ್ತೊಂದು ಮಗುವಿಗೆ ಜನ್ಮ ನೀಡಲಿರುವ ಬಗ್ಗೆ ತನ್ನ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

Comments are closed.