ಕ್ರೀಡೆ

ಫುಟ್ಬಾಲ್ ಆಟಗಾರ ರೊನಾಲ್ಡೋಗೆ ಕೊರೋನಾ!

Pinterest LinkedIn Tumblr


ನವದೆಹಲಿ: ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗೆ ಕೊರೋನಾ ದೃಢಪಟ್ಟಿದೆ ಎಂದು ಫೋರ್ಚುಗೀಸ್ ಫುಟ್ಬಾಲ್ ಫೆಡರೇಷನ್ ಹೇಳಿದೆ.

ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಫೋರ್ಚುಗೀಸ್ ಫುಟ್ಬಾಲ್ ಫೆಡರೇಷನ್, ರೊನೋಲ್ಡೋ ಅವರಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ಪೋರ್ಚುಗಲ್ ರಾಷ್ಟ್ರೀಯ ತಂಡದ ಪರವಾಗಿ ಆಡುತ್ತಿರುವ ರೊನಾಲ್ಡೋ, ನಿಯಮದಂತೆ ಪರೀಕ್ಷೆಗೊಳಪಟ್ಟಿದ್ದರು. ಇದೀಗ ಅದರ ವರದಿ ಬಂದಿದ್ದು, ರೊನಾಲ್ಡೋಗೆ ಸೋಂಕು ಒಕ್ಕರಿಸಿರುವುದು ದೃಢವಾಗಿದೆ. ಪ್ರಸ್ತುತ ರೊನಾಲ್ಡೋ ಅವರು ಐಸೊಲೇಷನ್ ನಲ್ಲಿದ್ದು, ರಾಷ್ಟ್ರೀಯ ತಂಡದಿಂದ ತಾತ್ಕಾಲಿಕವಾಗಿ ರೊನಾಲ್ಡೋ ರನ್ನು ಕೈ ಬಿಡಲಾಗಿದೆ. ಹೀಗಾಗಿ ಬುಧವಾರ ನಡೆಯಲಿರುವ ಸ್ವೀಡನ್ ವಿರುದ್ಧದ ಪಂದ್ಯಕ್ಕೆ ರೊನಾಲ್ಡೋ ಅಲಭ್ಯರಾಗಲಿದ್ದಾರೆ ಎಂದು ಫುಟ್ಬಾಲ್ ಫೆಡರೇಷನ್ ಹೇಳಿದೆ.

ಫುಟ್ ಬಾಲ್ ಇತಿಹಾಸದಲ್ಲೇ ತಂಡವೊಂದರ ಪರ ಅತೀ ಹೆಚ್ಚು ಗೋಲು ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರೊನಾಲ್ಡೋ ಪೋರ್ಚುಗಲ್ ಪರ 101 ಗೋಲುಗಳನ್ನು ಬಾರಿಸಿದ್ದಾರೆ.

ಇನ್ನು ಇದಕ್ಕೂ ಮೊದಲು ಸಾಕಷ್ಟು ಫುಟ್ ಬಾಲ್ ತಾರೆಯರು ಸೋಂಕಿಗೆ ತುತ್ತಾಗಿದ್ದಾರೆ. ಬ್ರೆಜಿಲ್ ಫಾರ್ವರ್ಡ್ ನೇಮಾರ್, ಜರ್ಮೈನ್ ತಂಡದ ಸಹ ಆಟಗಾರ ಕೈಲಿಯನ್ ಎಂಬಪ್ಪೆ ಮತ್ತು ಇಬ್ರಾಹಿಮೊವಿಕ್ ಕೂಡ ಸೋಂಕಿಗೆ ತುತ್ತಾಗಿದ್ದರು.

Comments are closed.