ಮನೋರಂಜನೆ

ಪ್ರಖ್ಯಾತ ಹಿರಿಯ ನಟ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿರುವುದು ಯಾಕೆ ಗೊತ್ತಾ?

Pinterest LinkedIn Tumblr


ಚೆನ್ನೈ: ಕಳೆದ 6 ತಿಂಗಳುಗಳಿಂದ ಯಾವುದೇ ಕೆಲಸ ನಡೆಯುತ್ತಿಲ್ಲ ಆದರೂ ನನಗೆ ಆದಾಯ ತೆರಿಗೆ ವಿಧಿಸಲಾಗುತ್ತಿದೆ ಎಂದು ಹೇಳಿ ಖ್ಯಾತ ನಟರೊಬ್ಬರು ಸ್ಥಳಿಯಾಡಳಿತದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಖ್ಯಾತ ಸಿನಿಮಾ ನಟ ಸೂಪರ್​ಸ್ಟಾರ್ ರಜನಿಕಾಂತ್ ಚೆನ್ನೈನ ಕೊಡಂಬಾಕಂನಲ್ಲಿ ಮದುವೆ ಹಾಲ್ ಒಂದನ್ನು ಹೊಂದಿದ್ದಾರೆ. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಆ ಹಾಲ್​ನಲ್ಲಿ ಯಾವುದೇ ವಿವಾಹ ಸಮಾರಂಭಗಳು, ಕಾರ್ಯಕ್ರಮಗಳು ನಡೆಯದೇ ಖಾಲಿ ಬಿದ್ದಿದೆ. ಈ ನಡುವೆ ಗ್ರೇಟರ್​ ಚೆನ್ನೈ ಕಾರ್ಪೋರೇಷನ್ ಮದುವೆ ಹಾಲ್​ಗೆ 6.50 ಲಕ್ಷ ರೂಪಾಯಿಗಳ ಆಸ್ತಿ ತೆರಿಗೆ ವಿಧಿಸಿದ್ದು ಇದನ್ನು ಪ್ರಶ್ನಿಸಿ ರಜನಿಕಾಂತ್ ಹೈಕೋರ್ಟ್ ಮೆಟ್ಟಲೇರಿದ್ದಾರೆ.

ಹೈಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಲಾಕ್​ಡೌನ್ ವಿಚಾರವನ್ನು ಉಲ್ಲೇಖಿಸಿರುವ ಅವರು ಕೊರೋನಾ ಲಾಕ್​ಡೌನ್​ನಿಂದಾಗಿ ಕಳೆದ ಹಲವು ತಿಂಗಳುಗಳಿಂದ ಮದುವೆ ಹಾಲ್​ನಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ, ಮದುವೆ ಹಾಲ್​ನಿಂದ ಯಾವುದೇ ಆದಾಯ ಬಂದಿಲ್ಲ. ಹೀಗಿರುವಾಗ ನಾವು ತೆರಿಗೆ ಕಟ್ಟುವುದು ಹೇಗೆ ಎಂದು ಅವರು ತಿಳಿಸಿದ್ದಾರೆ.

Comments are closed.