ಕ್ರೀಡೆ

ಸನ್​ರೈಸರ್ಸ್​ – ಚೆನ್ನೈ ಸೂಪರ್ ಕಿಂಗ್ಸ್​ ಪಂದ್ಯದ ವೇಳೆ ಧೋನಿ ಸಿಟ್ಟು, ಅಂಪೈರ್ ತೀರ್ಮಾನಕ್ಕೆ ಆಕ್ರೋಶ

Pinterest LinkedIn Tumblr

ದುಬೈ: ಐಪಿಎಲ್​ನ 29ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಹಾಗು ಚೆನ್ನೈ ಸೂಪರ್ ಕಿಂಗ್ಸ್​ ಮಧ್ಯೆ ನಡೆದ ಪಂದ್ಯದಲ್ಲಿ ಧೋನಿ ವರ್ತನೆ ಹಾಗು ಅಂಪೈರ್ ನಡವಳಿಕೆ ಬಗ್ಗೆ ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

https://twitter.com/i/status/1316073486884966400

https://twitter.com/Suneel_IND/status/1316082129386655744?ref_src=twsrc%5Etfw%7Ctwcamp%5Etweetembed%7Ctwterm%5E1316082129386655744%7Ctwgr%5Eshare_0&ref_url=https%3A%2F%2Fkannada.news18.com%2Fnews%2Fipl%2Fumpire-changes-mind-on-wide-after-seeing-ms-dhoni-angry-face-rmd-471729.html

https://twitter.com/i/status/1316082816782802945

ಮಂಗಳವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 29ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ತಂಡ 20 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೂರನೇ ಜಯ ದಾಖಲಿಸಿತು. ಈ ಮಧ್ಯೆ ಪಂದ್ಯ ನಡೆಯುವ ವೇಳೆ ಅಂಪೈರ್​ ತೆಗೆದುಕೊಂಡ ನಿರ್ಧಾರ ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ. ಧೋನಿ ಸಿಟ್ಟಾದರು ಎನ್ನುವ ಕಾರಣಕ್ಕೆ ಅಂಪೈರ್​ ತಮ್ಮ ನಿರ್ಧಾರವನ್ನೇ ಬದಲಿಸಿ ಬಿಟ್ಟಿದ್ದಾರೆ. ಈ ವಿಚಾರಕ್ಕೆ ಹೈದರಾಬಾದ್ ತಂಡ ಅಂಪೈರ್​ ವಿರುದ್ಧ ಸಾಕಷ್ಟು ಆಕ್ರೋಶ ಹೊರ ಹಾಕಿದೆ.

ಚೆನ್ನೈ ನೀಡಿದ್ದ 168 ರನ್​ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಉತ್ತಮ ಆರಂಭ ಕಾಣಲಿಲ್ಲ. ಕೇನ್ ವಿಲಿಯಮ್ಸ್​ ಪಂದ್ಯ ಕಟ್ಟೋಕೆ ಮುಂದಾದರಾದರೂ ಅವರಿಗೆ ಯಾರೂ ಉತ್ತಮ ಸಾತ್​ ನೀಡಲಿಲ್ಲ. ಕೊನೆಗೆ ಹೈದರಾಬಾದ್​ಗೆ 11 ಬಾಲ್​ಗಳಿಗೆ 25 ರನ್​ಗಳ ಅವಶ್ಯಕತೆ ಇತ್ತು. ಶಾರ್ದೂಲ್​ ಠಾಕೂರ್​ ಬೌಲಿಂಗ್​ನಲ್ಲಿದ್ದರೆ, ರಶೀದ್​ ಖಾನ್​ ಬ್ಯಾಟಿಂಗ್​ಗೆ ನಿಂತಿದ್ದರು. ಠಾಕೂರ್​ ನಿರಂತರವಾಗಿ ಬಾಲನ್ನು ಔಟ್​ಸೈಡ್​​ ಎಸೆಯುತ್ತಿದ್ದರು.

ಮೊದಲ ಬಾಲ್​ ತುಂಬಾನೇ ಹೊರ ಹೋಗಿದ್ದರಿಂದ ಅದನ್ನು ಅಂಪೈರ್​ ವೈಡ್​ ಎಂದು ಘೋಷಣೆ ಮಾಡಿದರು. ನಂತರದ ಬಾಲ್​ ಕೂಡ ಠಾಕೂರ್ ಅದೇ ರೀತಿ ಎಸೆದರು. ಈ ವೇಳೆ ಅಂಪೈರ್​ ವೈಡ್​ ಕೊಡಲು ಕೈ ಎತ್ತುವುದರಲ್ಲಿದ್ದರು. ಆಗ ಕೀಪಿಂಗ್​ ನಿಂತಿದ್ದ ಧೋನಿ ಸಿಟ್ಟಿನಲ್ಲೇ, ಇದನ್ನು ನೀವು ಹೇಗೆ ವೈಡ್ ನೀಡುತ್ತಿರಿ ಎಂದು ಕೈ ಸನ್ನೆಯ ಮೂಲಕವೇ ಪ್ರಶ್ನೆ ಮಾಡಿದರು. ಈ ವೇಳೆ ವೈಡ್​ ಕೊಡಲು ಮುಂದಾದ ಅಂಪೈರ್​ ಕೈ ಕೆಳಗಿಳಿಸಿ ಬಿಟ್ಟರು.

ಅಂಪೈರ್​ ನಿರ್ಧಾರಕ್ಕೆ ಸನ್​ ರೈಸರ್ಸ್​ ಹೈದರಾಬಾದ್ ನಾಯಕ ಡೇವಿಡ್​ ವಾರ್ನರ್​ ಸಿಟ್ಟಾಗಿದ್ದಾರೆ. ಧೋನಿ ಕೂಗಿದಾಕ್ಷಣ ನಿರ್ಧಾರ ಬದಲಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಅಲ್ಲದೆ, ಅಂಪೈರ್​ ಈ ರೀತಿ ಮಾಡಬಾರದಿತ್ತು ಎಂದು ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.

Comments are closed.