ಕರಾವಳಿ

ಮುಚ್ಚಿದ ಶಾಲೆಗಳು -ನಷ್ಟವೆಷ್ಟು ಗೊತ್ತೆ? ಮಕ್ಕಳ ಆರೋಗ್ಯ- ದೇಶದ ಆರ್ಥಿಕತೆ : ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ

Pinterest LinkedIn Tumblr

ಕೊರೊನಾದಿಂದಾಗಿ ಇನ್ನೂ ಶಾಲೆಗಳನ್ನು ತೆರೆದಿಲ್ಲ. ಕೇಂದ್ರ ಸರ್ಕಾರ ಸಮ್ಮತಿ ನೀಡಿದರೂ ರಾಜ್ಯ ಸರ್ಕಾರಗಳು ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳನ್ನು ತೆರೆಯೋದಿಕ್ಕೆ ಮುಂದಾಗಿಲ್ಲ. ಜೂನ್‌ನಿಂದ ಆರಂಭವಾಗಬೇಕಿದ್ದ ಶಾಲೆಗಳು ಇನ್ಯಾವಾಗ ತೆರೆಯುತ್ತವೆಯೋ ಗೊತ್ತಿಲ್ಲ.

ಈ ಮಧ್ಯೆ ಶಾಲೆಗಳು ಮುಚ್ಚಿದ್ದರಿಂದ ಲಕ್ಷ ಕೋಟಿ ನಷ್ಟ ಉಂಟಾಗಿದೆಯಂತೆ. ಮಕ್ಕಳಿಗೆ ಶಿಕ್ಷಣದಲ್ಲಾಗುವ ನಷ್ಟದ ಜೊತೆಗೆ ದೇಶದ ಭವಿಷ್ಯದ ಆದಾಯದಲ್ಲಿ ಲಕ್ಷ ಕೋಟಿ ನಷ್ಟ ಸಂಭವಿಸುವ ಸಾಧ್ಯತೆ ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಉಲ್ಲೇಖಿಸಿದೆ.

ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿಂದ ಶಾಲೆಗಳನ್ನು ಮುಚ್ಚಿರುವುದರಿಂದಾಗಿ ದೇಶದ ಭವಿಷ್ಯದ ಆದಾಯದಲ್ಲಿ ಸುಮಾರು 400 ಬಿಲಿಯನ್ ಡಾಲರ್ (29.34 ಲಕ್ಷ ಕೋಟಿ ರೂ.) ನಷ್ಟ ಉಂಟಾಗಲಿದೆ ಎಂದು ವಿಶ್ವಬ್ಯಾಂಕ್​ನ ವರದಿಯೊಂದು ಹೇಳಿದೆ.

ಇದು ದೇಶದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಕೂಡ ಉಂಟಾಗಲಿದೆಯಂತೆ. ಇದರಿಂದ ಎಲ್ಲಾ ರಾಷ್ಟ್ರಗಳ ಜಿಡಿಪಿ ಕುಸಿತ ಕಾಣುತ್ತದೆ ಎಂದು ಹೇಳಲಾಗಿದೆ.ಆರ್ಥಿಕತೆ ನೋಡುತ್ತಾ ಹೋದರೆ ಮಕ್ಕಳ ಆರೋಗ್ಯ ಕಡೆಗಣಿಸಬೇಕಾಗುತ್ತದೆ. ಹೀಗಾಗಿ ದೇಶಗಳು ಸಂದಿಗ್ಧ ಪರಿಸ್ಥಿತಿಯಲ್ಲಿವೆ.

ಇನ್ನೂ ಈ ನಷ್ಟ ಅನುಭವಿಸಿದ ದೇಶಗಳ ಪೈಕಿ ಹೆಚ್ಚಿನ ನಷ್ಟ ಭಾರತದಲ್ಲಿ ಆಗಲಿದೆಯಂತೆ. ಇದೇ ಪರಿಸ್ಥಿತಿ ಇನ್ನೂ ಕೆಲ ತಿಂಗಳು ಮುಂದುವರೆದರೆ ಆರ್ಥಿಕ ಬಿಕ್ಕಟ್ಟು ಇನ್ನೂ ಹೆಚ್ಚಾಗಲಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಸಿದೆ.

ಸದ್ಯದ ಪರಿಸ್ಥಿತಿ ಲೆಕ್ಕಾಚಾರದ ಪ್ರಕಾರ ದಕ್ಷಿಣ ಏಷ್ಯಾ ಭಾಗದ ರಾಷ್ಟ್ರಗಳಿಗೆ ಒಟ್ಟು 622 (-ಠಿ;45.63 ಲಕ್ಷ ಕೋಟಿ) ಬಿಲಿಯನ್ ಡಾಲರ್ ನಷ್ಟವಾಗಬಹುದು. ಬಿಕ್ಕಟ್ಟಿನ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋದರೆ ನಷ್ಟದ ಪ್ರಮಾಣ 880 ಬಿಲಿಯನ್ ಡಾಲರ್​ಗೆ (-ಠಿ;64.57 ಲಕ್ಷ ಕೋಟಿ) ಏರಿಕೆಯಾಗುವ ಸಾಧ್ಯತೆ ಇದೆ. ಹೆಚ್ಚಿನ ನಷ್ಟ ಭಾರತದಲ್ಲೇ ಸಂಭವಿಸಲಿದೆ. ಎಲ್ಲ ರಾಷ್ಟ್ರಗಳೂ ತಮ್ಮ ಜಿಡಿಪಿ ಬಹುಪಾಲನ್ನು ಈ ಕಾರಣದಿಂದ ಕಳೆದುಕೊಳ್ಳಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕರೊನಾ ಬಿಕ್ಕಟ್ಟು ದಕ್ಷಿಣ ಏಷ್ಯಾ ಭಾಗದ ಶಾಲೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಸುಮಾರು 39 ಕೋಟಿ ಮಕ್ಕಳು ಸದ್ಯ ಶಾಲೆಯಿಂದ ಹೊರಗುಳಿದಿದ್ದಾರೆ. ಸುಮಾರು 55 ಲಕ್ಷ ಮಕ್ಕಳು ಶಾಲೆ ಬಿಡುವ ಸಾಧ್ಯತೆ ಇದ್ದು, ಇದರಿಂದ ಮುಂಬರುವ ಪೀಳಿಗೆಯ ವಿದ್ಯಾರ್ಥಿಗಳ ಮೇಲೂ ಪರಿಣಾಮ ಆಗಲಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. 5 ತಿಂಗಳಿಗೂ ಹೆಚ್ಚು ಕಾಲ ಮಕ್ಕಳು ಶಾಲೆಗಳಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಹೊಸ ವಿಷಯಗಳ ಕಲಿಕೆಯ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ದುರ್ಬಲವಾಗಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆ ಮೇಲೆ ಕೋವಿಡ್‌-19 ಮತ್ತಷ್ಟು ದುಷ್ಪರಿಣಾಮ ಬೀರಲಿದ್ದು, ಈ ರಾಷ್ಟ್ರಗಳು ಹಿಂದೆಂದೂ ಕಾಣದಂಥ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆ ಎಂದು ಕೆಲ ಅಂಗ್ಲ ಮಾಧ್ಯಮಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಕೋವಿಡ್‌ ಕಾರಣದಿಂದಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ 39.1 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದ್ದಿದ್ದು, ಕಡ್ಡಾಯ ಶಿಕ್ಷಣವನ್ನು ನೀಡುವ ಪ್ರಯತ್ನಕ್ಕೆ ಮತ್ತಷ್ಟು ಅಡ್ಡಿ ಉಂಟಾಗಿದೆ.

ಶಾಲೆ ಮುಚ್ಚಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಹಲವು ಕ್ರಮಗಳನ್ನು ಸರ್ಕಾರಗಳು ಕೈಗೊಂಡಿದ್ದರೂ, ಇಂಥ ಶಿಕ್ಷಣ ಪ್ರಕ್ರಿಯೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಕಷ್ಟವಾಗಿದೆ’ ಎಂದು ತಿಳಿಸಲಾಗಿದೆ.

ಹಲವು ರಾಷ್ಟ್ರಗಳಲ್ಲಿ ಮಾರ್ಚ್‌ನಲ್ಲೇ ಶಾಲೆಗಳು ಮುಚ್ಚಿದ್ದವು. ಐದು ತಿಂಗಳಿಗಿಂತಲೂ ಅಧಿಕ ಕಾಲ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇಷ್ಟು ಅವಧಿ ಮಕ್ಕಳು ಶಾಲೆಗೆ ಹೋಗದೇ ಇದ್ದ ಕಾರಣ ಹೊಸ ವಿಷಯಗಳನ್ನು ಕಲಿಯುವುದನ್ನು ಅವರು ಬಿಟ್ಟಿದ್ದರೆ, ಕಲಿತಿರುವ ವಿಷಯಗಳನ್ನೂ ಮರೆಯುತ್ತಿದ್ದಾರೆ ಎನ್ನಲಾಗಿದೆ.

Comments are closed.