ಕ್ರೀಡೆ

ಕ್ರಿಕೆಟ್ ಸ್ಫಾಟ್ ಫಿಕ್ಸಿಂಗ್- ಶ್ರೀಶಾಂತ್ ನಿಷೇಧ ಶಿಕ್ಷೆ ಅವಧಿ ಇಂದಿಗೆ ಮುಕ್ತಾಯ

Pinterest LinkedIn Tumblr

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ ಭಾರತ ತಂಡದ ವೇಗಿ ಬೌಲರ್ ಎಸ್. ಶ್ರೀಶಾಂತ್ ಅವರ ಏಳು ವರ್ಷಗಳ ನಿಷೇಧ ಶಿಕ್ಷೆ ಅವಧಿ ಭಾನುವಾರ ಕೊನೆಗೊಂಡಿದೆ.

ನಿಷೇಧ ಅವಧಿ ಮುಕ್ತಾಯಗೊಂಡ ನಂತರ ದೇಶಿಯ ಮಟ್ಟದಲ್ಲಿ ಮತ್ತೆ ವೃತ್ತಿ ಜೀವನ ಆರಂಭಿಸುವುದಾಗಿ 37 ವರ್ಷದ ಶ್ರೀಶಾಂತ್ ಈ ಹಿಂದೆ ಹೇಳಿಕೊಂಡಿದ್ದು ದೈಹಿಕ‌ ಸಾಮರ್ಥ್ಯ ಪರೀಕ್ಷೆಯಲ್ಲಿ ಓಕೆ ಆದರೆ ಶ್ರೀಶಾಂತ್ ಅವರನ್ನು ಪರಿಗಣಿಸುವುದಾಗಿ ಶ್ರೀಶಾಂತ್ ತವರು ರಾಜ್ಯ ಕೇರಳ ಭರವಸೆ ಕೂಡ ನೀಡಿದೆ.

ಎಲ್ಲಾ ಆರೋಪಗಳಿಂದ ಇದೀಗ ಮುಕ್ತವಾಗುತ್ತಿದ್ದು, ಹೆಚ್ಚಾಗಿ ಪ್ರೀತಿಸುವ ಕ್ರೀಡೆಯನ್ನು ಪ್ರತಿನಿಧಿಸುತ್ತೇನೆ ಎಂದು ಶುಕ್ರವಾರವೇ ಶ್ರೀಶಾಂತ್ ಟ್ವೀಟ್ ಮಾಡಿದ್ದರು.

ಆಗಸ್ಟ್ ತಿಂಗಳಲ್ಲಿ ದೇಶಿಯ ಟೂರ್ನಿಗಳು ಆರಂಭವಾಗಬೇಕಿದ್ದು ಕೊರೋನಾ ಹಿನ್ನೆಲೆ ಮುಂದೂಡಲ್ಪಟ್ಟಿತ್ತು. ಕೇರಳ ಸರ್ಕಾರ ಅವಕಾಶ ನೀಡಿದರೆ ಶ್ರೀಶಾಂತ್ ಮತ್ತೆ ಕಮ್ ಬ್ಯಾಂಕ್ ಆಗುವುದು ಬಹುತೇಕ ಖಚಿತವಾಗಿದೆ.

Comments are closed.