ಗಲ್ಫ್

ಯುಎಇಯಲ್ಲಿರುವ ಸಂದರ್ಶನ ವೀಸಾ ಅವಧಿ ಮುಕ್ತಾಯಗೊಂಡಿರುವ ಪ್ರವಾಸಿಗರಿಗೆ ಸೆಪ್ಟಂಬರ್ 11ರಿಂದ ದಂಡ

Pinterest LinkedIn Tumblr

ದುಬೈ: ಯುಎಇಯಲ್ಲಿರುವ ಸಂದರ್ಶನ ವೀಸಾ ಹೊಂದಿರುವವರು ಈ ಮಾಹಿತಿಯ ಕಡೆ ಒಮ್ಮೆ ಕಣ್ಣಾಡಿಸಿ. ತಮ್ಮ ಸಂದರ್ಶನ ವೀಸಾ ಅವಧಿ ಮುಕ್ತಾಯಗೊಂಡಿರುವ ಪ್ರವಾಸಿಗರು ಈ ವರದಿಯನ್ನೊಮ್ಮೆ ಓದಿ…

ಯುಎಇಯಲ್ಲಿ ಮಾರ್ಚ್ 1ರ ಬಳಿಕ ಸಂದರ್ಶನ ವೀಸಾ ಅವಧಿ ಮುಕ್ತಾಯಗೊಂಡಿರುವ ಪ್ರವಾಸಿಗರು, ಯುಎಇಯಲ್ಲಿ ಅವಧಿ ಮೀರಿ ವಾಸಿಸಿರುವುದಕ್ಕಾಗಿ ಸೆಪ್ಟಂಬರ್ 11ರ ಬಳಿಕ ದಂಡ ಪಾವತಿಸಬೇಕಾಗುತ್ತದೆ.

ಈ ಬಗ್ಗೆ ಅಮೀರ್ ಕಾಲ್ ಸೆಂಟರ್ ಏಜಂಟೊಬ್ಬರು ಎಚ್ಚರಿಕೆಯ ಹೇಳಿಕೆ ನೀಡಿದ್ದು, ಅವಧಿ ಮೀರಿದ ವಾಸ್ತವ್ಯಕ್ಕಾಗಿ ಮೊದಲ ದಿನಕ್ಕೆ 200 ದಿರ್ಹಮ್ (ಸುಮಾರು 4,000 ರೂಪಾಯಿ) ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

‘‘ನಿಖರ ದಂಡ ಮೊತ್ತವನ್ನು ವಿಮಾನ ನಿಲ್ದಾಣಗಳಲ್ಲಿರುವ ವಲಸೆ ಅಧಿಕಾರಿಗಳು ಲೆಕ್ಕಹಾಕುತ್ತಾರೆ. ಅವಧಿ ಮೀರಿದ ವಾಸ್ತವ್ಯಕ್ಕೆ ಮೊದಲ ದಿನಕ್ಕೆ 200 ದಿರ್ಹಮ್ ಹಾಗೂ ಬಳಿಕದ ಪ್ರತಿ ದಿನಕ್ಕೆ ತಲಾ 100 ದಿರ್ಹಮ್ (ಸುಮಾರು 2,000 ರೂಪಾಯಿ) ಮತ್ತು 100 ದಿರ್ಹಮ್ ಸೇವಾ ಶುಲ್ಕ ವಿಧಿಸಲಾಗುತ್ತದೆ’’ ಎಂದು ಅವರು ಹೇಳಿದ್ದಾರೆ.

Comments are closed.