ಕ್ರೀಡೆ

ಧೋನಿಯನ್ನು ಹೊಗಳಿದ ಪಾಕ್ ಮಾಜಿ ಆಟಗಾರ ಇಂಜಮಾಮ್, ನಿವೃತ್ತಿ ಬಗ್ಗೆ ಹೇಳಿದ್ದೇನು…?

Pinterest LinkedIn Tumblr

ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಪಾಕಿಸ್ತಾನದ ಮಾಡಿ ಆಟಗಾರ ಇಂಜಮಾಮ್ ಉಲ್ ಹಕ್ ಹೊಗಳಿದ್ದಾರೆ.

ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.’ಮ್ಯಾಚ್ ವಿನ್ನರ್’ವೀಡಿಯೊದಲ್ಲಿ,”ಧೋನಿ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ, ಮೈದಾನದಲ್ಲಿ ಆಡುವುದನ್ನು ನೋಡಲು ಬಯಸುತ್ತಾರೆ.ಮಹಾನ್ ಆಟಗಾರ ಮನೆಯಲ್ಲಿ ನಿವೃತ್ತಿ ಹೊಂದಬಾರದು.ಅವರು ಮೈದಾನದಿಂದ ನಿವೃತ್ತಿ ಘೋಷಿಸಬೇಕಾಗಿತ್ತು ಎಂದು ತಿಳಿಸಿದ್ದಾರೆ.

ಸಚಿನ್ ತೆಂಡೊಲ್ಕರ್ ಅವರಿಗೂ ಇದೇ ರೀತಿಯಲ್ಲಿ ಹೇಳಿದ್ದೆ. ದೊಡ್ಡ ಅಭಿಮಾನಿ ಬಳಗ ಹೊಂದಿದ್ದು, ಮೈದಾನದಲ್ಲಿಯೇ ನಿವೃತ್ತಿ ಘೋಷಿಸಬೇಕು ಎಂದು ಹೇಳಿದ್ದೆ. ಆನಂತರ, ಅದ್ದೂರಿ ಗೌರವದೊಂದಿಗೆ ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಿದರು.ಧೋನಿ ಕೂಡಾ ಅದೇ ರೀತಿ ಅಭಿಮಾನಿಗಳನ್ನು ಹೊಂದಿದ್ದು, ಅವರು ಕೂಡಾ ಮೈದಾನದಲ್ಲಿಯೇ ನಿವೃತ್ತಿಯಾಗಬೇಕಿತ್ತು ಎಂದು ಇಂಜಮಾಮ್ ಉಲ್ ಹಕ್ ಅಭಿಪ್ರಾಯಪಟ್ಟಿದ್ದಾರೆ.

ಧೋನಿ ಟೀಂ ಇಂಡಿಯಾದ ಅತ್ಯುತ್ತಮ ನಾಯಕರಾಗಿ ಕಾರ್ಯನಿರ್ವಹಿಸಿದ್ದು, ಸುರೇಶ್ ರೈನಾ, ಆರ್ ಅಶ್ವಿನ್ ಅಂತಹ ಮ್ಯಾಚ್ ವಿನ್ನರ್ ಬೆಳೆಸಿದ ಕ್ರೆಡಿಟ್ ಅವರಿಗೆ ಸಲ್ಲಬೇಕು, ಧೋನಿ ಇನ್ನಿಂಗ್ಸ್ ಬೆಳೆಸುತ್ತಿದ್ದಂತೆ ಮ್ಯಾಚ್ ಫಿನಿಶ್ ಮಾಡುತ್ತಿದ್ದ ಅತ್ಯುತ್ತಮ ಆಟಗಾರರಾಗಿದ್ದರು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.

Comments are closed.