ಕ್ರೀಡೆ

27 ವರ್ಷದ ಕೆ ಎಲ್ ರಾಹುಲ್ ಗೆ 46 ವರ್ಷದ ಬಾಲಿವುಡ್ ನಟಿಯ ಮೇಲೆ ಮನಸ್ಸಾಗಿದೆಯಾ?

Pinterest LinkedIn Tumblr


ಟೀಮ್ ಇಂಡಿಯಾದಲ್ಲಿ ಭರವಸೆಯ ಆಟಗಾರ ಎಂದೆನಿಸಿಕೊಂಡಿರುವ ರಾಹುಲ್ ದ್ರಾವಿಡ್ ನಂತರ ಕ್ರಿಕೆಟ್ ನ ಮೂರು ಪ್ರಕಾರಗಳಲ್ಲಿ ಸೈ ಎನಿಸಿಕೊಂಡಿರುವ ಮತ್ತು ಮೊಹಮ್ಮದ್ ಕೈಫ್ ಹೇಳುವ ಪ್ರಕಾರ ಭಾರತ ತಂಡದ ಸ್ವಿಸ್ ನೈಫ್ (Swiss knife) ಎಂದೇ ಹೆಸರಿಟ್ಟಿರುವ ಕರ್ನಾಟಕದ ಮತ್ತೊಬ್ಬ ದಾಂಡಿಗ ಕೆ ಎಲ್ ರಾಹುಲ್ ಅವರು ಬಾಲಿವುಡ್ ನ ಈ ತಾರೆಗೆ ತುಂಬಾ ಇಷ್ಟ ಪಡುತ್ತಾರಂತೆ.

ಕೆಲವು ದಿನಗಳ ಹಿಂದೆ ಕರನ್ ಜೋಹರ್ ಅವರ ಫೇಮಸ್ ಟಾಕ್ ಶೋ ‘ಕಾಫಿ ವಿತ್ ಕರನ್’ ಕಾರ್ಯಕ್ರಮದಲ್ಲಿ ಬಾಲಿವುಡ್ ಬೆಡಗಿಯರಲ್ಲಿ ನಿಮಗೆ ಯಾರು ಇಷ್ಟ ಎಂದು ಕೇಳಿದಾಗ, ರಾಹುಲ್ ಅವರು ‘ಮಲೈಕಾ ಆರೋರಾ’ ಇವರು ನನ್ನ ಮೊದಲ ಇಷ್ಟ ಎಂದು ಹೇಳಿದ್ದರು. ಮಲೈಕಾ ಅವರ ವಯಸ್ಸು ಸದ್ಯಕ್ಕೆ 46 ಇದ್ದು ರಾಹುಲ್ ಅವರ ವಯಸ್ಸು 27 ಇದೆ. ಈ ಬಾಲಿವುಡ್ ಬೆಡಗಿ ಸಲ್ಮಾನ್ ಖಾನ್ ಸಹೋದರ ಅರಬಾಜ್ ಖಾನ್ ರಿಂದ ಘಟಸ್ಫೋಟ ಪಡೆದು ಈಗ ತನಗಿಂತ ಚಿಕ್ಕವರಾದ ಅರ್ಜುನ ಕಪೂರ ಜೊತೆಗಿನ ಸಂಬಂಧದಿಂದ ಯಾವಾಗಲೂ ಚರ್ಚೆಯಲ್ಲಿ ಇರುತ್ತಾರೆ.

ಇದೇ ವಿಷಯದಿಂದ ರಾಹುಲ್ ಅವರು ಚರ್ಚೆಯಲ್ಲಿದ್ದಾರೆ. ತಮಗಿಷ್ಟವಾದ ನಾಯಕಿಯ ಹೆಸರು ಹೇಳಿದರೂ ಅದಕ್ಕೆ ಮಿಡಿಯಾದವರೂ ಬೇರೆ ಸಂಬಂಧ ಕಲ್ಪಿಸುತ್ತಾರೆ.

ರಾಹುಲ್ ಅವರು ಯಾವಾಗಲೂ ತಮ್ಮ ಸಂಬಂಧದ ಬಗ್ಗೆ ಮೌನವಾಗಿಯೇ ಇರುತ್ತಾರೆ. ನಡುವೆ ಅವರ ಹೆಸರು ‘ಜನ್ನತ್’ ಫೆಮ್ ನಟಿ ಸೋನಲ್ ಚವ್ಹಾಣ್ ಅವರ ಜೊತೆಗೂ ಜೋಡಿಸಿದ್ದರು. ಆಗ ಸ್ವತಃ ಸೋನಲ್ ಅವರೆ ಈ ಬಗ್ಗೆ ಮಾಹಿತಿ ನೀಡಿದ್ದರು. ‘ಮಿಡಿಯಾದಲ್ಲಿ ಹೇಳಿದ್ದೆಲ್ಲ ಬರೀ ಸುಳ್ಳು. ರಾಹುಲ್ ಒಬ್ಬ ಒಳ್ಳೆಯ ಕ್ರಿಕೆಟ್ ಆಟಗಾರರಾಗಿದ್ದಾರೆ, ಹಾಗೂ ಅವರು ತುಂಬಾ ಬುದ್ಧಿವಂತ ಮತ್ತು ಒಳ್ಳೆಯ ವ್ಯಕ್ತಿಯಾಗಿದ್ದಾರೆ’.

ಏನೇ ಆಗಲಿ ಟ್ರೆಂಡಿಂಗ್ ನಲ್ಲಿರುವ ವ್ಯಕ್ತಿಗಳು ಏನೇ ಮಾಡಿದರೂ ಅದು ಸುದ್ದಿಯಾಗಿ ಬಿಡುತ್ತದೆ. ಕೆ ಎಲ್ ರಾಹುಲ್ ಅವರು ಸದ್ಯಕ್ಕಂತೂ ಭಾರತದ ಭರವಸೆಯ ಆಟಗಾರ. ಕ್ರಿಕೆಟ್ ನಲ್ಲಿ ರಾಹುಲ್ ದ್ರಾವಿಡ್ ರಂತೆ ಇವರು ಕರ್ನಾಟಕದ ಹೆಸರನ್ನು ಬೆಳಗಿಸಲಿ ಎಂದು ಆಶಿಸೋಣ ಅಷ್ಟೇ.

Comments are closed.