ಮುಂಬೈ: ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಖ್ಯಾತನ ಅಮಿತಾ ಭ್ ಬಚ್ಚನ್ ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ 20 ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಅಮಿತಾ ಭ್ ಬಚ್ಚನ್ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಅವರ ಇತ್ತೀಚಿನ ಕೊರೋನಾ ಟೆಸ್ಚ್ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಸ್ವತಃ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಅಮಿತಾಬ್ ಬಚ್ಚನ್ ಅವರನ್ನು ಅವರ ನಿವಾಸಕ್ಕೆ ಕರೆತಂದು ಬಿಡಲಾಯಿತು.
ಈ ವಿಚಾರವನ್ನು ಸ್ವತಃ ಅಮಿತಾಭ್ ಪುತ್ರ, ನಟ ಅಭಿಷೇಕ್ ಬಚ್ಚನ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
‘ನನ್ನ ತಂದೆಯ ಪ್ರಸ್ತುತ ಕೊರೊನಾ ಪರೀಕ್ಷೆಯ ವರದಿಯು ನೆಗೆಟಿವ್ ಬಂದಿದೆ. ಅಲ್ಲದೆ, ಅವರೀಗ ಡಿಸ್‌ಚಾರ್ಜ್ ಆಗಿದ್ದಾರೆ. ಈಗ ಅವರು ಮನೆಯಲ್ಲಿದ್ದು, ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಹಾರೈಕೆಗಳಿಗೆ ಧನ್ಯವಾದಗಳು’ ಎಂದಿದ್ದಾರೆ ಅಭಿಷೇಕ್. ಆದರೆ, ಅವರಿಗೆ ಕೊರೊನಾ ವರದಿ ಇನ್ನೂ ಪಾಸಿಟಿವ್ ಆಗಿಯೇ ಇದೆ ಈ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
‘ದುರಾದೃಷ್ಟವಶಾತ್ ನನ್ನ ವರದಿಯೂ ಇನ್ನೂ ಪಾಸಿಟಿವ್ ಆಗಿಯೇ ಇದೆ. ಹಾಗಾಗಿ, ನಾನಿನ್ನೂ ಆಸ್ಪತ್ರೆಯಲ್ಲೇ ಇದ್ದೇನೆ. ನಿಮಗೆ ಮಾತು ನೀಡುತ್ತಿದ್ದೇನೆ. ನಾನು ಇದರೊಂದಿಗೆ ಹೋರಾಡಿ, ಆದಷ್ಟು ಬೇಗ ಮರಳಲಿದ್ದೇನೆ. ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಇನ್ನೊಮ್ಮೆ ಧನ್ಯವಾದಗಳು’ ಎಂದು ಅಭಿಷೇಕ್ ಟ್ವೀಟ್ ಮಾಡಿದ್ದಾರೆ.
Comments are closed.