ಲಾಹೋರ್: ಪಾಕಿಸ್ತಾನ ಕ್ರಿಕೆಟರ್ ಶಾಹಿದ್ ಅಫ್ರಿದಿಗೆ ಕೊರೋನಾ ವೈರಸ್ ತಗುಲಿದೆ. ಈ ವಿಷಯವನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಗುರುವಾರದಿಂದ ನನಗೆ ಅನಾರೋಗ್ಯ ಕಾಡಿತ್ತು, ಅತೀವವಾಗಿ ಮೈ ಕೈ ನೋವು ಇತ್ತು, ದುರಾದೃಷ್ಟವಶಾತ್ ಕೊರೋನಾ ಪಾಸಿಟಿವ್ ದೃಢವಾಗಿದೆ, ಶೀಘ್ರ ಗುಣಮುಖವಾಗುವಂತೆ ಅಲ್ಲಾಹುನಲ್ಲಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ಶಾಹಿದ್ ಅಫ್ರಿದಿ ಬಾಂಗ್ಲಾದೇಶದ ಮುಶ್ಕೀರ್ ರಹೀಮ್ ಅವರ ಬ್ಯಾಟ್ ಅನ್ನು ಹರಾಜಿನಲ್ಲಿ ಖರೀದಿಸಿ, ಕೊರೋನಾ ವಿರುದ್ಧ ಹೋರಾಟಕ್ಕಾಗಿ ಹಣ ನೀಡಿದ್ದರು.
Comments are closed.