ರಾಷ್ಟ್ರೀಯ

ಕೋಣೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ 11 ವರ್ಷದ ಬಾಲಕಿಯ ಮೃತದೇಹ ಪತ್ತೆ; ಗಾಂಜಾ ಮಾಫಿಯಾ ಕೈವಾಡವಿದೆ ಎಂದು ಆರೋಪಿಸಿದ ಪೋಷಕರು

Pinterest LinkedIn Tumblr

ಕೊಲ್ಲಂ: 11 ವರ್ಷದ ಬಾಲಕಿಯ ಮೃತದೇಹ ಆಕೆಯ ಕೋಣೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದರ ಹಿಂದೆ ಗಾಂಜಾ ಮಾಫಿಯಾ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಎನ್‌ಎಸ್‌ಎಸ್ ಎಚ್‌ಎಸ್‌ಎಸ್ ಪ್ರಕ್ಕುಲಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6ನೇ ತರಗತಿ ವಿದ್ಯಾರ್ಥಿನಿ ಅಮೀನಾ ಮೃತದುರ್ದೈವಿ. ಇನ್ನು ಮಗಳ ಸಾವಿನ ಕುರಿತಂತೆ ಶಂಕೆ ವ್ಯಕ್ತಪಡಿಸಿರುವ ತಾಯಿ ನನ್ನ ಮಗಳು ಎಂದಿಗೂ ಅಂತಹ ಪ್ರಯತ್ನ ಮಾಡುವುದಿಲ್ಲ. ಆಕೆಯ ಸಾವಿನ ಹಿಂದೆ ಗಾಂಜಾ ಮಾಫಿಯಾ ಕೈವಾಡವಿದ್ದು ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಸಂಜೆಯ ದಿನನಿತ್ಯದ ಪ್ರಾರ್ಥನೆಗಳನ್ನು ನಡೆಸುವ ಮುನ್ನ ಅಮೀನಾ ತನ್ನ ತಾಯಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ನಂತರ ಮಲಗುವ ಕೋಣೆಗೆ ಹೋಗಿದ್ದಾಳೆ. ಎಷ್ಟು ಸಮಯವಾದರೂ ಬಾರದ ಮಗಳನ್ನು ಕರೆಯಲು ಕೋಣೆಗೆ ಹೋಗಿ ನೋಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಮಗಳನ್ನು ಕಂಡ ಅವರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ಇದರ ಆಧಾರದ ಮೇಲೆ ಹೆಚ್ಚಿನ ತನಿಖೆ ಆರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.