ಕ್ರೀಡೆ

ಸೆಕ್ಯೂರಿಟಿ ಗಾರ್ಡ್‌ ಜೊತೆ ಟೀಂ ಇಂಡಿಯಾ ಆಟಗಾರ್ತಿಯ ಸಖತ್ ಸ್ಟೆಪ್

Pinterest LinkedIn Tumblr


ಐಸಿಸಿ ಮಹಿಳಾ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸಿದೆ. ನ್ಯೂಜಿಲೆಂಡ್ ವಿರುದ್ಧ ರೋಚಕ 4 ರನ್​ಗಳ ಗೆಲುವು ಸಾಧಿಸುವ ಮೂಲಕ ಭಾರತೀಯ ವನಿತೆಯರು ಮುಂದಿನ ಹಂತಕ್ಕೆ ತಲುಪಿದ್ದಾರೆ.

ಈ ಸಂಭ್ರಮಕ್ಕೂ ಮುನ್ನ ಟೀಂ ಆಟಗಾರ್ತಿ ಮಾಡಿದ ಡ್ಯಾನ್ಸ್ ವಿಡಿಯೋವೊಂದನ್ನು ಐಸಿಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಪ್ರತಿಭಾನ್ವಿತ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಆದರೆ ಈ ಬಾರಿ ಬ್ಯಾಟಿಂಗ್‌ ಹೊರತಾಗಿ ಸುದ್ದಿಯಾಗಿದ್ದಾರೆ.

ಜೆಮಿಮಾ ನ್ಯೂಜಿಲೆಂಡ್​ ವಿರುದ್ದದ ಪಂದ್ಯಕ್ಕೂ ಮುನ್ನ ಸೆಕ್ಯೂರಿಟಿ ಗಾರ್ಡ್‌ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಲವ್​ ಆಜ್​ ಕಲ್​ 2 ಚಿತ್ರದ ಗೀತೆಗೆ ಸೆಕ್ಯೂರಿಟಿ ಗಾರ್ಡ್​ ಜೊತೆ ನರ್ತಿಸುವ ಮೂಲಕ ವಿಡಿಯೋ ಮಾಡಿದ್ದರು. ಈ ವಿಡಿಯೋವನ್ನು ಐಸಿಸಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಟೀಂ ಇಂಡಿಯಾ ಆಟಗಾರ್ತಿಯ ನೃತ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಟೀಂ ಇಂಡಿಯಾ ವನಿತೆಯರು ಡ್ರೆಸ್ಸಿಂಗ್ ರೂಮ್​ನಲ್ಲೂ ಡ್ಯಾನ್ಸ್​ ಮಾಡಿ ಸುದ್ದಿಯಾಗಿದ್ದರು.

ಭಾರತ ಮಹಿಳಾ ತಂಡದ ಯುವ ಪ್ರತಿಭೆ ರಾಧಾ ಯಾದವ್‌ ಅವರನ್ನು ಪರಿಚಯಿಸಿ ವೇದಾ ಕೃಷ್ಣಮೂರ್ತಿ ಒಂದೆರಡು ಸ್ಟೆಪ್‌ ಕೂಡ ಹಾಕಿ ರಂಜಿಸಿದ್ದರು.

Comments are closed.