ಕ್ರೀಡೆ

ನಟ ವಿಷ್ಣು ವಿಶಾಲ್ ಜೊತೆ ಜ್ವಾಲಾ ಗುಟ್ಟಾ ‘ಕಿಸ್ಸಿಂಗ್’!

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್ ಡಬಲ್ಸ್ ಪಟು ಜ್ವಾಲಾ ಗುಟ್ಟಾ, ಅಂಗಣದ ಒಳಗೆಯಷ್ಟೇ ಅಲ್ಲದೆ ಮೈದಾನದ ಹೊರಗೂ ಸದಾ ಸುದ್ದಿಯಲ್ಲಿದ್ದಾರೆ. ತಮ್ಮ ಕೆರಿಯರ್‌ನಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವ ಜ್ವಾಲಾ ಗುಟ್ಟಾ, ವಿವಾದದಿಂದಲೂ ಹೊರತಾಗಿಲ್ಲ. ಈ ಮಧ್ಯೆ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆಯಲ್ಲಿ ತಮಿಳು ನಟನಿಗೆ ಮುತ್ತಿಕ್ಕುವ ಚಿತ್ರಗಳು ವೈರಲ್ ಆಗಿದೆ.

ತಮಿಳು ನಟ ವಿಷ್ಣು ವಿಶಾಲ್ ಹಾಗೂ ಜ್ವಾಲಾ ಗುಟ್ಟಾ ನಡುವಣ ಡೇಟಿಂಗ್ ಬಗ್ಗೆ ಕೆಲವು ಸಮಯಗಳ ಹಿಂದಿನಿಂದಲೇ ಗಪ್ ಚುಪ್ ಸುದ್ದಿಗಳು ಹರಡುತ್ತಲೇ ಇದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಲು ಕಾಲಿವುಡ್ ಸ್ಟಾರ್ ನಿರಾಕರಿಸಿದ್ದರು. ಇದೀಗ ಸ್ವತ: ಜ್ವಾಲಾ ಗುಟ್ಟಾ ಅವರೇ ತಮ್ಮ ಪ್ರಿಯಕರನ ಜೊತೆಗಿನ ಖಾಸಗಿ ಚಿತ್ರಗಳನ್ನು ಹಂಚುವ ಮೂಲಕ ಎಲ್ಲ ಅಂತೆ ಕಂತೆಗಳಿಗೆ ವಿರಾಮ ಹಾಕಿದ್ದಾರೆ.

ವಿಷ್ಣು ವಿಶಾಲ್‌ರನ್ನು ತಬ್ಬಿಕೊಂಡು ಮುತ್ತಿಕ್ಕುವ ಚಿತ್ರಗಳನ್ನು ಜ್ವಾಲಾ ಗುಟ್ಟಾ ಹಂಚಿದ್ದಾರೆ. ‘ಮೈ ಬೇಬಿ ಹ್ಯಾಪಿ ನ್ಯೂ ಇಯರ್’ ಎಂದು ಉಲ್ಲೇಖಿಸಿದ್ದಾರೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಇಬ್ಬರು ಖಾಸಗಿ ಜೀವನದಲ್ಲಿ ವೈಮನಸ್ಸು ಉಂಟಾಗಿ ವೈಯಕ್ತಿಕ ಬದುಕುಗಳಿಂದ ವಿಚ್ಛೇದನ ಪಡೆದವರಾಗಿದ್ದಾರೆ. ಮಾಜಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕಧಾರಿ ಜ್ವಾಲಾ ಗುಟ್ಟಾ, ಬ್ಯಾಡ್ಮಿಂಟನ್ ಪಟು ಚೇತನ್ ಆನಂದ್‌ರನ್ನು 2005ರಲ್ಲಿ ವಿವಾಹವಾಗಿದ್ದರು. ಆದರೆ ದಾಂಪತ್ಯದಲ್ಲಿ ವಿರಹ ಉಂಟಾಗಿ 2011ರಲ್ಲಿ ವಿಚ್ಛೇದನ ಪಡೆದಿದ್ದರು. ಈ ಮಧ್ಯೆ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಜೊತೆಗಿನ ಗಾಸಿಪ್ ಸುದ್ದಿಗಳು ಹರಡಿದ್ದವು.

ಇತ್ತೀಚೆಗೆ ಕೇಂದ್ರ ಸರಕಾರದ ಪೌರತ್ವ ವಿಧೇಯಕ ಕಾಯಿದೆಯನ್ನು ವಿರೋಧಿಸುವ ಮೂಲಕ ಜ್ವಾಲಾ ಗುಟ್ಟಾ ಗುಮನ ಸೆಳೆದಿದ್ದರು.

ಅತ್ತ 2011ರಲ್ಲಿ ಹೆಸರಾಂತ ತಮಿಳು ನಟ ಕೆ ನಟರಾಜಿ ಪುತ್ರಿ ರಜನಿ ನಟರಾಜ್‌ರನ್ನು ವಿಷ್ಣು ವಿಶಾಲ್ ವಿವಾಹವಾಗಿದ್ದರು. 2017ರಲ್ಲಿ ಆರ್ಯನ್ ಎಂಬ ಮಗುವಿಗೆ ಅಪ್ಪನಾಗಿದ್ದರು. ಆದರೆ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ 2018ರಲ್ಲಿ ಪತ್ನಿಗೆ ವಿಚ್ಛೇದನ ನೀಡಿದ್ದರು.

‘ರಾಕ್ಷಸನ್’ ತಮಿಳು ಚಿತ್ರದ ಮೂಲಕ ವಿಷ್ಣು ಹೆಚ್ಚಿನ ಗಮನ ಸೆಳೆದಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಅನೇಕ ನಟಿಗಳ ಜತೆಗೆ ಗಾಸಿಪ್ ಸುದ್ದಿಗಳು ಹರಡಿದ್ದವು.

ಜ್ವಾಲಾ ಗುಟ್ಟಾ ಬಗ್ಗೆ ಕೆಲವು ಸಮಯಗಳ ಹಿಂದೆ ಹೇಳಿಕೆ ನೀಡಿರುವ ವಿಷ್ಣು ವಿಶಾಲ್, “ನಾವು ಒಂದು ವರ್ಷದಿಂದ ಒಬ್ಬರನ್ನೊಬ್ಬರು ತಿಳಿದಿದ್ದೇವೆ. ನಾವು ಕಾಮನ್ ಸ್ನೇಹಿತರನ್ನು ಹೊಂದಿದ್ದೇವೆ. ಅವರ ಜತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ನಾವಿಬ್ಬರು ಒಬ್ಬರನೊಬ್ಬರು ಮೆಚ್ಚಿದ್ದೆವೆ. ಇದಕ್ಕಿಂತಲೂ ಹೆಚ್ಚಾಗಿ ಈ ಸಮಯದಲ್ಲಿ ಕಾಮೆಂಟ್ ಮಾಡಲು ಇಷ್ಟಪಡುವುದಿಲ್ಲ. ಹೌದು, ಒಬ್ಬರಿಗೊಬ್ಬರು ಇಷ್ಟಪಡುತ್ತೇವೆ. ಆದರೆ ಸಂಬಂಧಕ್ಕಿಂತಲೂ ವೃತ್ತಿಪರದತ್ತ ಹೆಚ್ಚಿನ ಗಮನ ಹರಿಸಿದ್ದೇವೆ” ಎಂದಿದ್ದರು.

Comments are closed.