ಕ್ರೀಡೆ

ದನಾ ಕಾಯೋನು ನಟಿ ಜೊತೆ ಹಾರ್ದಿಕ್‌ ಪಾಂಡ್ಯ ನಿಶ್ಚಿತಾರ್ಥ!

Pinterest LinkedIn Tumblr


ಮುಂಬೈ: ಎಲ್ಲರೂ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರೆ, ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಮನೆಯಲ್ಲಿನ ಸಡಗರ ಮಾತ್ರ ಮುಗಿಲು ಮುಟ್ಟಿತು.
ಗಾಯದ ಸಮಸ್ಯೆ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿದಿರುವ 26 ವರ್ಷದ ಆಲ್‌ರೌಂಡರ್‌ ಮುಂಬರುವ ನ್ಯೂಜಿಲೆಂಡ್‌ ಪ್ರವಾಸದ ಮೂಲಕ ತಂಡಕ್ಕೆ ಹಿಂದಿರುಗುವುದನ್ನು ಎದುರು ನೋಡುತ್ತಿದ್ದಾರೆ. ಆದರೆ, ಇದಕ್ಕೂ ಮುನ್ನ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಅಭಿಮಾನಿಗಳಿಗೆ ಒಂದು ಅಚ್ಚರಿಯ ಸುದ್ದಿಯನ್ನು ನೀಡಿದ್ದಾರೆ.

ಬಾಲಿವುಡ್‌ನ ಬೆಡಗಿ ನತಾಶಾ ಸ್ಟ್ಯಾನ್ಕೊವಿಚ್‌ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಹಾರ್ದಿಕ್‌ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

ಹಾರ್ದಿಕ್‌ ಮತ್ತು ನತಾಶಾ ನಡುವೆ ಪ್ರೀತಿ-ಪ್ರೇಮ ನಡೆಯುತ್ತಿರುವ ಕುರಿತಾಗಿ ಈಗಾಗಲೇ ಸಾಕಷ್ಟು ವದಂತಿಗಳು ಹಬ್ಬಿದ್ದವು. ಆದರೆ ಈ ಎಲ್ಲಾ ವದಂತಿಗಳಿಗೆ ಟೀಮ್‌ ಇಂಡಿಯಾದ ಆಲ್‌ರೌಂಡರ್‌ ಖುದ್ದಾಗಿ ತೆರೆ ಎಳೆದಿದ್ದಾರೆ.

ತಮ್ಮ ನಿಶ್ಚಿತಾರ್ಥ ಕುರಿತಾಗಿ ಅಧಿಕೃತ ಸಂದೇಶ ರವಾನಿಸುವುದಕ್ಕೂ ಮುನ್ನ ಹಾರ್ದಿಕ್‌, ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರೇಯಸಿ ಜೊತೆಗಿನ ವಿಶೇಷ ಫೋಟೊ ಒಂದನ್ನು ಹಂಚಿಕೊಂಡಿದ್ದರು. ಈ ಮೂಲಕ ಇಬ್ಬರ ನಡುವಣ ಲವ್‌ ಸ್ಟೋರಿ ಬಹಿರಂಗವಾಗಿತ್ತು. ಆದರೆ ಇದಾದ ಮರುದಿನ ಮುಂಜಾನೆಯೇ ನಿಶ್ಚಿತಾರ್ಥದ ಸುದ್ದಿ ಹೊರಬಿದ್ದಿದೆ.

ನಿಶ್ಚಿತಾರ್ಥದ ಫೋಟೊದಲ್ಲಿ “ನಾನು ನಿನ್ನವನು.. ನೀನು ನನ್ನವಳು.. ಹಿಂದೂಸ್ತಾನದ ಎಲ್ಲರಿಗೂ ಈ ಸಂಗತಿ ತಿಳಿಯಲಿ,” ಎಂದು ಹಾರ್ದಿಕ್‌ ಬರೆದುಕೊಂಡಿದ್ದು, ಫೋಟೊದಲ್ಲಿ ಇಬ್ಬರೂ ನಿಶ್ಚಿತಾರ್ಥದ ಉಂಗುರು ಪ್ರದರ್ಶಿಸಿದ್ದಾರೆ. ಸ್ಪೀಡ್‌ ಬೋಟ್‌ನಲ್ಲಿ ಸಮುದ್ರ ಮಧ್ಯಕ್ಕೆ ತೆರಳಿ ಒಬ್ಬರನ್ನೊಬ್ಬರು ಬಾಳಸಂಗಾತಿಯನ್ನಾಗಿ ಸ್ವೀಕರಿಸಲು ಒಪ್ಪಿರುವುದು ವಿಶೇಷ.

ಸರ್ಬಿಯಾ ಮೂಲಕ ನಟಿಯನ್ನು ಹಾರ್ದಿಕ್‌ ಈ ಮೊದಲು ತಮ್ಮ ಕುಟುಂಬ ಸದಸ್ಯರಿಗೆ ಪರಿಚಯ ಮಾಡಿಸಿದ ಸಂದರ್ಭದಲ್ಲಿ ಇವರಿಬ್ಬರ ನಡುವಣ ಲವ್‌ ಸ್ಟೋರಿ ಕುರಿತಾಗಿ ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಹಾರ್ದಿಕ್‌ ನನ್ನ ಉತ್ತಮ ಗೆಳೆಯ ಎಂದು ನತಾಶಾ ಹೇಳಿಕೊಂಡಿದ್ದರು.

ಕನ್ನಡ ಸಿನಿಮಾದಲ್ಲಿ ನಟಿಸಿರುವ ನತಾಶಾ ಸ್ಟ್ಯಾನ್ಕೊವಿಚ್‌ ಯಾರು?
ಬಾಲಿವುಡ್‌ನ ಹಲವು ಸಿನೆಮಾಗಳ ಮಾದಕ ಹಾಡುಗಳಿಗೆ ಡಾನ್ಸರ್‌ ಆಗಿ ಹೆಜ್ಜೆ ಹಾಕಿರುವ ಸರ್ಬಿಯಾ ಮೂಲದ ನಟಿ ನತಾಶಾ ಸ್ಟ್ಯಾನ್ಕೊವಿಚ್‌, ಹಿಂದಿ ಬಿಗ್‌ ಬಾಸ್‌ನ 8ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಅಲ್ಲದೆ ಹಿಂದಿ ಟೆಲಿವಿಷನ್‌ ಡಾನ್ಸ್‌ ಶೋ ನಚ್‌ ಬಲ್ಲಿಯೇದಲ್ಲೂ ಕಾಣಿಸಿಕೊಂಡಿದ್ದರು. ಕನ್ನಡ ಸಿನಿಮಾದಲ್ಲು ನಟಿಸಿರುವ ನತಾಶಾ, ಯೋಗರಾಜ್‌ ಭಟ್‌ ನಿರ್ದೇಶನದ ಹಾಗೂ ದುನಿಯಾ ವಿಜಿ ನಟನೆಯ ‘ದನಾ ಕಾಯೋನು’ ಸಿನಿಮಾದದಲ್ಲೂ ಐಟಮ್‌ ಗರ್ಲ್‌ ಆಗಿ ಕಾಣಿಸಿಕೊಂಡಿದ್ದಾರೆ.

Comments are closed.