ಕ್ರೀಡೆ

ಫುಟ್ಬಾಲ್ ಫೀಲ್ಡ್‌ನಲ್ಲೂ ಸನ್ನಿ ಲಿಯೋನ್ ಹವಾ

Pinterest LinkedIn Tumblr


ದುಬೈ: ಬಾಲಿವುಡ್‍ನ ಮಾದಕ ಚೆಲುವೆ ಸನ್ನಿ ಲಿಯೋನ್ ಬರೀ ಆಕ್ಟಿಂಗ್ ಮಾತ್ರವಲ್ಲ ಫುಟ್ಬಾಲ್ ಆಡೋದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಗ್ರೌಂಡಿಗಿಳಿದು ಫುಟ್ಬಾಲ್ ಆಡಿ, ಗೋಲ್ ಮೇಲೆ ಗೋಲ್ ಬಾರಿಸಿ ಅಭಿಮಾನಿಗಳ ಮನ ಕದ್ದಿದ್ದಾರೆ.

ಅಬುದಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್ ವೇಳೆಯಲ್ಲಿ ಸನ್ನಿ ತಮ್ಮ ಫುಟ್ಬಾಲ್ ಸ್ಕಿಲ್ಸ್ ಪ್ರದರ್ಶಿಸಿದ್ದಾರೆ. ಮೈದಾನದಲ್ಲಿ ಫುಟ್ಬಾಲ್ ಆಡುವ ಮೂಲಕ ಸನ್ನಿ ಲಿಯೋನ್ ನಟನೆಗೂ ಜೈ, ಕ್ರೀಡೆಗೂ ಸೈ ಎನಿಸಿಕೊಂಡಿದ್ದಾರೆ. ಫುಟ್ಬಾಲ್ ಆಟದಲ್ಲೂ ಕೌಶಲ್ಯ ಮೆರೆದು ಸನ್ನಿ ಲಿಯೋನ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಮೂಲಕ ಟಿ10 ಲೀಗ್ ಹೆಚ್ಚಿನ ಪ್ರಚಾರ ಕೂಡ ನೀಡಿದ್ದಾರೆ. ಜೊತೆಗೆ ತಮ್ಮ ಡೆಲ್ಲಿ ಬುಲ್ಸ್ ತಂಡಕ್ಕೆ ಪ್ರೋತ್ಸಾಹಿಸಿದ್ದಾರೆ.

ಟಿ10 ಲೀಗ್‍ನಲ್ಲಿ ಡೆಲ್ಲಿ ಬುಲ್ಸ್ ತಂಡಕ್ಕೆ ಚಿಯರ್ ಮಾಡಲು ಸನ್ನಿ ಲಿಯೋನ್ ಅಬುದಾಬಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಡೆಲ್ಲಿ ಬುಲ್ಸ್ ತಂಡದ ಜರ್ಸಿ ತೊಟ್ಟು ಮಿಂಚಿದ್ದಾರೆ. ಅಲ್ಲದೆ ಫುಟ್ಬಾಲ್ ಆಡಿ, ಗೋಲ್ ಹೊಡೆದು ಖುಷಿಪಟ್ಟಿದ್ದಾರೆ. ಈ ವೇಳೆ ಸನ್ನಿಗೆ ಪತಿ ಡೇಯಲ್ ವೆಬೆರ್ ಕೂಡ ಸಾಥ್ ನೀಡಿದ್ದರು. ಈ ವಿಡಿಯೋವನ್ನು ಸನ್ನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಸಂತೋಷಪಟ್ಟಿದ್ದಾರೆ.

ಸನ್ನಿ ಲಿಯೋನ್ ಡೆಲ್ಲಿ ಬುಲ್ಸ್ ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಇಂಗ್ಲೆಂಡ್‍ನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಮಾಜಿ ಎಡಗೈ ವೇಗಿ ಜಹೀರ್ ಖಾನ್, ಪಾಕಿಸ್ತಾನದ ಶೋಯೆಬ್ ಮಲಿಕ್, ಸೊಹೈಲ್ ತನ್ವಿರ್, ಇಂಗ್ಲೆಂಡ್‍ನ ಆದಿಲ್ ರಶೀದ್, ಶ್ರೀಲಂಕಾದ ಕುಸಾಲ್ ಪರೇರಾ ಹಾಗೂ ಅಫಘಾನಿಸ್ತಾನದ ಮೊಹಮ್ಮದ್ ನಬಿ ಮುಂತಾದವರು ಡೆಲ್ಲಿ ಬುಲ್ಸ್ ತಂಡದಲ್ಲಿದ್ದಾರೆ.

Comments are closed.