ಮನೋರಂಜನೆ

ನಟ ಯಶ್ ಗಾಗಿ ಕನ್ನಡ ಕಲಿತು, ಭೇಟಿಯಾಗಲು ಫಿಲಿಪೈನ್ಸ್‌ನಿಂದ ಬಂದ ಅಭಿಮಾನಿ

Pinterest LinkedIn Tumblr


ಬೆಂಗಳೂರು: ‘ಕೆಜಿಎಫ್’ ಸಿನಿಮಾ ಬಿಡುಗಡೆಯಾದ ಬಳಿಕ ರಾಕಿಂಗ್ ಸ್ಟಾರ್ ಯಶ್‍ಗೆ ಕೇವಲ ಸ್ಯಾಂಡಲ್‍ವುಡ್‍ನಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗಷ್ಟೆ ಕೇರಳದಿಂದ ಯಶ್ ಭೇಟಿಯಾಗಲು ಅಭಿಮಾನಿಗಳು ಬಂದಿದ್ದರು. ಇದೀಗ ರಾಕಿಭಾಯ್ ನೋಡಲು ಅಭಿಮಾನಿಯೊಬ್ಬರು ಕನ್ನಡ ಕಲಿತು ಫಿಲಿಪೈನ್ಸ್‌ನಿಂದ ಬಂದಿದ್ದಾರೆ.

ಪೇಟೆ ಅಶೋಕ್ ಜೋರ್ನಲ್ ಎಂಬ ಅಭಿಮಾನಿ ವಿದೇಶದಿಂದ ಯಶ್ ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ನಾನು ಯಶ್ ಅಭಿಮಾನಿ, ಅವರನ್ನು ನಾನು ನೋಡಬೇಕು ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪೇಟೆ ಅಶೋಕ್ ಜೋರ್ನಲ್ ಏರ್‌ಪೋರ್ಟ್‌ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಅಭಿಮಾನಿ ಯಶ್ ನೋಡಲು ಬೆಂಗಳೂರಿಗೆ ಬಂದಿದ್ದು, ಯಶ್‍ಗಾಗಿ ಕನ್ನಡ ಕೂಡ ಕಲಿಯುತ್ತಿದ್ದಾರೆ. ಜೊತೆಗೆ ಕೆಜಿಎಫ್ ಸಿನಿಮಾದಲ್ಲಿನ ಯಾಶ್ ಅಭಿನಯ ಹಾಗೂ ಯಶೋಮಾರ್ಗದ ಮೂಲಕ ಜನಸೇವೆ ಮಾಡುತ್ತಿರುವುದನ್ನು ಮೆಚ್ಚಿಕೊಂಡಿದ್ದಾರೆ.

ಇದೇ ತಿಂಗಳ 20ರ ಬುಧವಾರದಂದು ಜೋರ್ನಲ್ ವಾಪಸ್ ಫಿಲಿಪೈನ್ಸ್‌ಗೆ ತೆರಳಬೇಕಿದೆ. ಹೀಗಾಗಿ ಅದಕ್ಕೂ ಮುನ್ನ ಯಶ್ ಅವರನ್ನ ಭೇಟಿ ಮಾಡಿಸಿ ಎಂದು ಮಾಧ್ಯಮ ಮತ್ತು ಇತರೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Comments are closed.