ಕ್ರೀಡೆ

ವಿಶ್ವಕಪ್‌ನಿಂದ ಪಾಕ್ ಹೊರಗಿಡಲು ಇಂಡಿಯಾ ಬೇಕಂತಲೇ ಸೋಲುತ್ತೆ: ಮಾಜಿ ಕ್ರಿಕೆಟಿಗ ಬಸಿತ್‌ ಅಲಿ!

Pinterest LinkedIn Tumblr


ಕರಾಚಿ(ಜೂ.29): ಪಾಕಿಸ್ತಾನ ತಂಡವನ್ನು ಸೆಮಿಫೈನಲ್‌ನಿಂದ ದೂರವಿಡಲು ಭಾರತ ತಂಡ ತನ್ನ ಕೊನೆ 2 ಲೀಗ್‌ ಪಂದ್ಯಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ವಿರುದ್ಧ ಸೋಲು ಕಾಣಲಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್‌ ಅಲಿ ಅತಿರೇಕದ ಹೇಳಿಕೆ ನೀಡಿದ್ದಾರೆ.

‘ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸುವುದನ್ನು ಭಾರತ ಸಹಿಸುವುದಿಲ್ಲ. ಬಾಂಗ್ಲಾ, ಲಂಕಾ ವಿರುದ್ಧ ಬೇಕಂತಲೇ ಸೋಲಲಿದೆ ಎಂದಿದ್ದಾರೆ.

ಆಷ್ಘಾನಿಸ್ತಾನ ವಿರುದ್ಧ ಭಾರತ ಎಷ್ಟು ಕೆಟ್ಟಪ್ರದರ್ಶನ ತೋರಿತು ಎನ್ನುವುದನ್ನು ಎಲ್ಲರೂ ನೋಡಿದ್ದಾರೆ’. ಇನ್ನುಳಿದ 2 ಪಂದ್ಯದಲ್ಲಿ ಭಾರತ ಸೋಲು ಕಾಣುತ್ತೆ. ಈ ಮೂಲಕ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡವನ್ನು ಹೊರಗಿಡಲಿದೆ ಎಂದು ಸ್ಥಳೀಯ ಟೀವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಬಸಿತ್ ಹೇಳಿದ್ದಾರೆ. ಲಂಕಾ, ಬಾಂಗ್ಲಾದೇಶ ಗೆದ್ದರೆ ಪಾಕಿಸ್ತಾನದ ಸೆಮೀಸ್‌ ಹಾದಿ ಕಠಿಣಗೊಳ್ಳಲಿದೆ.

Comments are closed.