
ನವದೆಹಲಿ: ಇಷ್ಟು ದಿನಾ ಮೆನ್ ಇನ್ ಬ್ಲೂನಲ್ಲಿ ಮಿಂಚುತ್ತಿದ್ದ ಟೀಮ್ ಇಂಡಿಯಾ ಆಟಗಾರರು, ಇದೇ ಮೊದಲ ಬಾರಿಗೆ ಆರೆಂಜ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶ್ವಕಪ್ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ವಿರಾಟ್ ಕೊಹ್ಲಿ ಪಡೆ ಆತಿಥೇಯ ಇಂಗ್ಲೆಂಡ್ ತಂಡವನ್ನು ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಎದುರಿಸಲಿದೆ.
ಮೆನ್ ಇನ್ ಬ್ಲೂ ಖ್ಯಾತಿಯ ಕೊಹ್ಲಿ ಬಳಗ ಕಿತ್ತಳೆ ಬಣ್ಣದ ಜೆರ್ಸಿ ಧರಿಸುವುದಕ್ಕೆ ದೇಶದಲ್ಲಿ ವ್ಯಾಪಕ ವಿರೋಧ ಕೇಳಿಬರುತ್ತಿದೆ. ಇದರ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡವಿದೆ. ಕೇಂದ್ರ ಸರ್ಕಾರವು ದೇಶವನ್ನು ಕೆಸರೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆರೋಪಿಸಿದೆ.
ಈ ವಿವಾದದ ನಡುವೆಯೂ ಬಿಸಿಸಿಐ ಆರೆಂಜ್ ಜೆರ್ಸಿ ಅನಾವರಣಗೊಳಿಸಿದೆ. ಹೊಸ ಜೆರ್ಸಿ ತೊಟ್ಟು ಟೀಮ್ ಇಂಡಿಯಾ ಆಟಗಾರರರು ಮಿಂಚುತ್ತಿದ್ಧಾರೆ. ಆದ್ರೆ, ಟ್ವಿಟಗರು ಮಾತ್ರ ಟೀಮ್ ಇಂಡಿಯಾಕ್ಕೆ ನೀಡಿರುವ ಹೊಸ ಜೆರ್ಸಿಯ ಬಗ್ಗೆ ಟ್ರೋಲ್ ಮಾಡಿದ್ದು ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುವ ಹುಡುಗರ ಸಮವಸ್ತ್ರದಂತೆ ಇದೆ ಎಂದು ಟ್ರೋಲ್ ಮಾಡ್ತಿದ್ದಾರೆ.
ಟೀಮ್ ಇಂಡಿಯಾದ ಆಟಗಾರರು ಧರಿಸಿರುವ ಆರೆಂಜ್ ಜೆರ್ಸಿ ಹಾಗೂ ಪೆಟ್ರೋಲ್ ಬಂಕ್ನ ಜೆರ್ಸಿಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ. ಆದ್ರೆ, ಐಸಿಸಿಯು ನಾವು ಕಲರ್ಗಳ ಆಯ್ಕೆಯನ್ನು ಕೊಟ್ಟಿದ್ದೆವು. ಅವರು ಕೊನೆಗೆ ಡಾರ್ಕ್ ಬ್ಲೂ ಮತ್ತು ಆರೆಂಜ್ ಬಣ್ಣ ಇರುವುದನ್ನು ಆಯ್ಕೆ ಮಾಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದೆ.
ಇನ್ನು ಈ ಸಂಬಂಧ ಬಿಸಿಸಿಐ ಬ್ಲೂ ಮತ್ತು ಆರೆಂಜ್ ಬಣ್ಣವು ಸೃಜನೇಶಿಲನೆ ಮತ್ತು ಶಾಂತಿ ಸಂತೋಷ ಸಂಕೇತವಾಗಿದೆ ಎಂದು ಬಣ್ಣದ ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿತ್ತು.
Comments are closed.