ಕ್ರೀಡೆ

ಔಟ್ ಆಗದಿದ್ದರೂ ಔಟ್ ಎಂದು ವಿರಾಟ್ ಮೈದಾನ ತೊರೆದಿದ್ದೇಕೆ?

Pinterest LinkedIn Tumblr


ಬೆಂಗಳೂರು: ವಿಶ್ವಕಪ್​​ನಲ್ಲಿಂದು ನಡೆಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಪಂದ್ಯ ಸಾಕಷ್ಟು ರೋಚಕತೆ ಪಡೆಯುತ್ತಿದೆ. ಈಗಾಗಲೇ ಟೀಂ ಇಂಡಿಯಾ ತನ್ನ ಇನ್ನಿಂಗ್ಸ್​ ಮುಗಿಸಿದ್ದು, ರೋಹಿತ್ ಶರ್ಮಾರ ಅಮೋಘ ಶತಕ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಎದುರಾಳಿಗೆ ಗೆಲ್ಲಲು 337 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

ಪಂದ್ಯದ ಮಧ್ಯೆ ರೋಹಿತ್ ಶರ್ಮಾ 140 ರನ್​ಗೆ ಔಟ್ ಆದ ಬಳಿಕ ತಂಡದ ರನ್​ಗತಿಯನ್ನು ಏರಿಸುವ ಜವಾಬ್ದಾರಿ ಹೊತ್ತ ಕೊಹ್ಲಿ ಔಟ್ ಆಗದಿದ್ದರೂ, ಅಂಪೈರ್ ಔಟ್ ನೀಡದಿದ್ದರೂ ಔಟ್ ಎಂದು ಮೈದಾನ ತೊರೆದ ಘಟನೆ ನಡೆದಿದೆ.

ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ವೇಳೆ 46.4 ಓವರ್ ಆಗುವಾಗ ಮಳೆರಾಯ ಪಂದ್ಯಕ್ಕೆ ಅಡ್ಡಿ ಪಡಿಸಿದ. ಈ ಸಂದರ್ಭ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿತ್ತು. ಕೊಹ್ಲಿ 71 ರನ್ ಗಳಿಸಿ ಕ್ರೀಸ್​ನಲ್ಲಿದ್ದರು. ಮಳೆ ನಿಂತ ಬಳಿಕ ಭಾರತ ಮತ್ತೆ ಬ್ಯಾಟಿಂಗ್​ ಆರಂಭಿಸಿತಾದರು ಮುಂದಿನ ಓವರ್​ನಲ್ಲೇ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಇದು ನಾಟೌಟ್ ಆಗಿತ್ತು.

48ನೇ ಓವರ್​ ಬೌಲಿಂಗ್ ಮಾಡಿದ ಮೊಹಮ್ಮದ್ ಅಮೀರ್ ತನ್ನ 4ನೇ ಎಸೆತ ಬೌನ್ಸರ್ ಹಾಕಿದ್ದು, ಕೊಹ್ಲಿ ಹೊಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟ್​ಗೆ ತಾಗದೇ ಸಂಪೂರ್ಣ ವಿಫಲವಾಗಿ ಕೀಪರ್ ಸರ್ಫರಾಜ್ ಕೈ ಸೇರಿತು.

ಈ ಸಂದರ್ಭ ಅಂಪೈರ್​​ ನಿರ್ಣಯಕ್ಕೂ ಕಾಯದ ಕೊಹ್ಲಿ ಕ್ರೀಡಾಸ್ಪೂರ್ತಿ ಮೆರೆಯುತ್ತ ಔಟ್ ಎಂದು ಮೈದಾನ ತೊರೆದರು. ಆದರೆ ಅಸಲಿಗೆ ಇದು ಔಟ್ ಆಗಿರಲಿಲ್ಲ. ಚೆಂಡು ಬ್ಯಾಟ್​ಗೆ ತಾಗಿಯೇ ಇರಲಿಲ್ಲ. ಇದು ಅಂಪೈರ್​​ಗೂ ತಿಳಿದಿತ್ತು, ಹೀಗಾಗಿ ಅಂಪೈರ್​ ಕೂಡ ಔಟ್ ನೀಡಲಿಲ್ಲ. ಆದರೆ, ಕೊಹ್ಲಿ ಔಟ್ ಎಂದು ತಿಳಿದು ಕ್ರೀಸ್​ನಿಂದ ಹೊರ ನಡೆದರು. ಡಿಆರ್​​ಎಸ್​ ಮತ್ತವೂ ಮುಖ ಮಾಡಿಲ್ಲ. ಭಾರತದ ನಾಯಕನ ಈ ವರ್ತನೆಗೆ ಭಾರೀ ಬೆಲೆ ತೆರಬೇಕಾಯಿತು. ಅಲ್ಲದೆ ರನ್​​ರೇಟ್​ನಲ್ಲೂ ಕುಸಿತ ಕಾಣಬೇಕಾಯಿತು.

Comments are closed.