ಕ್ರೀಡೆ

ಇಂಡೋ ಪಾಕ್​ ಮ್ಯಾಚ್​ಗೇ ಕ್ರಿಸ್​ ಗೇಲ್​ ಬೆಂಬಲ​!

Pinterest LinkedIn Tumblr


ವಿಶ್ವದ ಗಮನ ಸೆಳೆದಿರೋ ಕ್ರಿಕೆಟ್​ ಪಂದ್ಯಾವಳಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಕುರಿತು ಅಭಿಮಾನದ ಮಹಾಪೂರವೇ ಹರಿಯುತ್ತಿದೆ. ಈ ಮಧ್ಯೆ ವೆಸ್ಟ್​ ಇಂಡೀಸ್ ತಂಡದ​ ಸ್ಟೋಟಕ ಆಟಗಾರ ಕ್ರಿಸ್​ ಗೇಲ್​ ವಿಶೇಷವಾಗಿ ಭಾರತ-ಪಾಕ್ ಕದನದ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿ ವಿಭಿನ್ನವಾಗಿ ಪ್ರೋತ್ಸಾಹಿಸಲು ಮುಂದಾಗಿದ್ದಾರೆ.

ಇಂದಿನ ಮ್ಯಾಚ್​​​​ಗಾಗಿ ಕಾತುರರಾಗಿರೋ ವಿಂಡೀಸ್​ ತಂಡದ ಸ್ಫೋಟಕ ಬ್ಯಾಟ್ಸ್​​ಮನ್​ ಕ್ರಿಸ್​ ಗೇಲ್​​ ವಿಶೇಷ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಗೇಲ್​​ ಬಿಳಿ ಬಣ್ಣದ ಸೂಟ್​ ಧರಿಸಿದ್ದು, ಸೂಟ್​​ನ ಬಲ ಮತ್ತು ಎಡ ಭಾಗದ ತೋಳಿನಲ್ಲಿ ಇಂಡೋ-ಪಾಕ್​​ ತಿರಂಗದ ಕಲರ್​​ ಹಾಕಿಕೊಂಡಿದ್ದಾರೆ.

ಇನ್ನು ತಮ್ಮ ಟ್ವಿಟರ್​​ನಲ್ಲಿ ಪೋಟೋ ಪೋಸ್ಟ್ ಮಾಡಿದ್ದು, ಇವತ್ತಿನ ಹೈವೋಲ್ಟೆಜ್ ಮ್ಯಾಚ್​ಗೋಸ್ಕರ ಕಾಯ್ತಿದ್ದೇನೆ. ಅಲ್ದೇ, ಸೆಪ್ಟೆಂಬರ್​ 20ರಂದು ನನ್ನ ಬರ್ತಡೇಗೆ ಸೂಟ್​ ಇದೇ ಆಗಿದೆ ಎಂದು ಇನ್​ಸ್ಟಾ ಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

ಕ್ರಿಸ್ ಗೇಲ್ ಸ್ಪೆಷಲ್ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್​ ಅಭಿಮಾನಕ್ಕೆ ದೇಶ,ಭಾಷೆಯ ಗಡಿ ಇಲ್ಲ ಎಂದು ಅಭಿಮಾನಿಗಳು ಕಮೆಂಟ್​ ಮಾಡ್ತಿದ್ದಾರೆ. ಇನ್ನು ಈ ಭಾವೈಕ್ಯತೆ ಡ್ರೆಸ್​ನ್ನು ತಮ್ಮ ಹುಟ್ಟುಹಬ್ಬದ ಪಾರ್ಟಿಗೂ ಬಳಸುವುದಾಗಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೇಳಿದ್ದಾರೆ.

Comments are closed.