ಕ್ರೀಡೆ

ಬೂಂ ಬೂಂ ಬೂಮ್ರಾ ಜೊತೆ ಗಾಸಿಪ್ ಕುರಿತು ನಟಿ ಹೇಳಿದ್ದೇನು?

Pinterest LinkedIn Tumblr


ಸ್ಯಾಂಡಲವುಡ್​ ಬಾಲಿವುಡ್​ ಹೀಗೆ ಸಿನಿಮಾ ರಂಗ ಯಾವುದೇ ಇದ್ದರೂ ಗಾಸಿಪ್​ ಮಾತ್ರ ಕಾಮನ್​. ಒಂದಲ್ಲ ಒಂದು ನಟ-ನಟಿಯರ ಹೆಸರು ಕ್ರಿಕೆಟ್​ ಸ್ಟಾರ್​ಗಳ ಜೊತೆ ಕೇಳಿ ಬರೋದು ಕಾಮನ್​. ಸೌತ್ ಇಂಡಸ್ಟ್ರಿಯ ಸ್ಟಾರ್ ಅನುಪಮಾ ಹೆಸರು ಕೂಡ ಬೂಂ ಬೂಂ ಬೂಮ್ರಾ ಜೊತೆ ಜೋರಾಗಿಯೇ ಕೇಳಿಬಂದಿತ್ತು. ಆದರೇ ಇದೀಗ ಈ ಗಾಸಿಪ್​​ಗೆ ಸ್ವತಃ ಅನುಪಮಾ ಅಂತ್ಯ ಹಾಡಿದ್ದಾರೆ. ಇಷ್ಟಕ್ಕೂ ಅನುಪಮಾ ಏನಂದ್ರು ನೀವೆ ಓದಿ.

ಸೌತ್ ಸಿನಿ ಇಂಡಸ್ಟ್ರೀಯ ಸ್ಟಾರ್ ನಟಿ ಅನುಪಮಾ ಬೂಂ ಬೂಂ ಬೂಮ್ರಾ ಜೊತೆ ಲಲ್ವಿ ಡವ್ವಿ ನಡೆಸ್ತಿದ್ದಾರೆ ಅನ್ನೋ ಟಾಕ್​ ಕ್ರಿಕೆಟ್ ಹಾಗೂ ಸಿನಿ ಅಂಗಳದಲ್ಲಿ ಕೇಳಿ ಬಂದಿತ್ತು. ಅಯ್ಯೋ ನಮ್ ಅನುಪಮಾ ಬೂಮ್ರಾ ಜೊತೆ ಎಂಗೇಜ್ ಅಂತಾ ಆಕೆಯ ಫ್ಯಾನ್ಸ್​ ಕೊಂಚ ಬೇಸರವಾಗಿತ್ತು ಆಯ್ತು. ಆದ್ರೆ ಅನುಪಮಾ ಇವೆಲ್ಲಾವನ್ನ ಸೈಲೆಂಟ್ ಆಗಿ ನೋಡ್ತಿದ್ರು. ಬಟ್ ಈ ಬಗ್ಗೆ ಈ ಚೆಲುವೆ ರಿಯಾಕ್ಷನ್ ಮಾಡಿರಲಿಲ್ಲ. ಅದ್ಯಾವಾಗಾ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟಾಫ್ ಆಫ್ ದಿ ಟೌನ್ ಆಯ್ತು ಅನುಪಮಾ ಕೊನೆಗೂ ಮೌನ ಮೌರಿದ್ದಾರೆ.

ಇದೆಲ್ಲವೂ ಕೇವಲ ಊಹಾಪೋಹ. ನಾನು ಬುಮ್ರಾ ಒಳ್ಳೆ ಫ್ರೆಂಡ್ಸ್​ ಅಷ್ಟೇ. ನಮ್ಮ ನಡುವೆ ಈ ಲವ್ವು ಗಿವ್ವು ಎಲ್ಲಾ ಏನೂ ಇಲ್ಲ. ಇಂತಹ ವಿಚಾರಗಳಿಂದ ನಾನು ದೂರವೇ ಇದ್ದೇನೆ ಅಂತಾ ಮಲ್ಲು ಕುಟ್ಟಿ ಅನುಪಮಾ ಬೂಮ್ರಾ ನುಡವಿನ ಪ್ರೇಮಾ ಕಾವ್ಯಕ್ಕೆ ಫುಲಿಸ್ಟಾಪ್ ಇಟ್ಟಿದ್ದಾರೆ.

ಅಂದಹಾಗೇ ಅನುಪಮಾ ಪರಮೇಶ್ವರನ್​, ಪ್ರೇಮಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ. ಮೊದಲ ಸಿನಿಮಾದಲ್ಲಿಯೇ ಭವರಸೆ ಮೂಡಿಸಿದ ಅನುಪಮಾ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ಪವರ್ ಸ್ಟಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ನಟಸಾರ್ವಭೌಮದಲ್ಲಿ ಅಭಿನಯಿಸಿ ಕನ್ನಡಿಗರಿಗೆ ಚಿರಪರಿಚತರಾದ ಚೆಂದದ ನಟಿ.

Comments are closed.