ಕ್ರೀಡೆ

ಯುವರಾಜ್ ಸಿಂಗ್ ವಿದಾಯಕ್ಕೆ ಇಂಗ್ಲೆಂಡ್​​ ಸ್ಟುವರ್ಡ್ ಬ್ರಾರ್ಡ್ ಸೇರಿ ಹಲವರ ಪ್ರತಿಕ್ರಿಯೆ..!

Pinterest LinkedIn Tumblr


ನವದೆಹಲಿ: ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಅನೇಕ ಮಂದಿ ಆಟಗಾರರು ತಮ್ಮದೇ ಆದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. 21ನೇ ಶತಮಾನದಿಂದ ಹಿಡಿದು ಇಂದಿನ ತನಕ ತಂಡದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದವರನ್ನು/ ಸಲ್ಲಿಸುತ್ತಿರುವವರನ್ನು ದೇಶದ ಕ್ರಿಕೆಟ್​ ಅಭಿಮಾನಿಗಳು ಎಂದು ಮರೆಯುವುದಿಲ್ಲ ಅದರಲ್ಲಿ ಯುವರಾಜ್​ ಸಿಂಗ್​ ಒಬ್ಬರಾಗಿದ್ದರು. ಸದ್ಯ ತಮ್ಮ ವೃತ್ತಿ ಜೀವನಕ್ಕೆ ಫುಲ್​ಸ್ಟಾಪ್​​ ಇಟ್ಟಿದ್ದಾರೆ.

ಯುವರಾಜ್ ಸಿಂಗ್ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಮುಖ್ಯವಾದ ಪಾತ್ರ ನಿರ್ವಹಿಸಿದ್ದವರು. ಇವರು ತಂಡದಲ್ಲಿ ಆಲ್-ರೌಂಡರ್ ಆಗಿ ತಮ್ಮ ಬ್ಯಾಟಿಂಗ್​ ನಿಂದ ಅನೇಕ ಬಾರಿ ವಿಶೇಷವಾದ ಆಟ ಪ್ರದರ್ಶನ ತೋರಿದ್ದಾರೆ. ಹಲವಾರು ಸಂದರ್ಭಗಳಲ್ಲಿ ತನ್ನ ತಂಡದ X- ಫ್ಯಾಕ್ಟರ್ ಆಟಗಾರನಾಗಿಯೂ ಇವರು ತನ್ನನ್ನು ತೋಡಗಿಸಿಕೊಂಡಿದ್ದರು.

ಜೂನ್​ 10, 2019 ಸೋಮವಾರ ಯುವರಾಜ್​ ಸಿಂಗ್​ ವಿದಾಯ ಘೋಷಣೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಾದ ಫೇಸ್​​ಬುಕ್​​, ಟ್ವಿಟರ್​​ನಲ್ಲಿ ಅವರಿಗೆ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿವೆ. ಅಲ್ಲದೇ ಕ್ರಿಕೆಟ್​ ಜಗತ್ತಿನ ಪ್ರಮುಖ ಆಟಗಾರಾದ ವಿರಾಟ್ ಕೊಹ್ಲಿ, ಸಚಿವ ತೆಂಡಲ್ಕೂರ್, ವೀರೇಂದ್ರ ಸೆಹ್ವಾಗ್​, ಸ್ಟುವರ್ಡ್ ಬ್ರಾರ್ಡ್​ ಮತ್ತಿತರ ಸಹ ಅವರ ಈ ನಿರ್ಧಾರಕ್ಕೆ ಶುಭಾಶಯಗಳನ್ನು ಕೋರಿ, ಅವರ ಜೊತೆ ಕಳೆದ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

Comments are closed.