ಕೋಲಾರ: ಹೆಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡೋದಾದರೆ ಹರಿಜನರ ಮನೆಯಲ್ಲಿ ಮಾಡಲಿ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಹೆಚ್ಡಿಕೆ ಗ್ರಾಮ ವಾಸ್ತವ್ಯ ಮಾಡೋದಾದರೆ ಹರಿಜನರ ಮನೆಯಲ್ಲಿ ಮಾಡಲಿ. ಸವರ್ಣೀಯರ ಮನೆಗಳಿಗೆ ಹೋದರೆ ಸಮಸ್ಯೆ ಗೊತ್ತಾಗಲ್ಲ ಎಂದು ಶ್ರೀನಿವಾಸ್ ಗೌಡ ಸಿಎಂಗೆ ಟಾಂಗ್ ನೀಡಿದ್ದಾರೆ.
ಇನ್ನು ನಾನು ಚಿಕ್ಕವನಿದ್ದಾಗ ದಲಿತನೊಬ್ಬ ನನ್ನ ಸ್ನೇಹಿತನಾಗಿದ್ದ ಅವರ ಮನೆಯಲ್ಲಿ ಮೀನು ಸಾರು ಮಾಡಿದ್ದರು ಆಗ ನಾನು ಅವರ ಮನೆಯಲ್ಲಿ ಅದನ್ನು ಸೇವಿಸಿ ಬಂದಿದ್ದೆ ಎಂದ ಅವರು, ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಹರಿಜನರ ಮನೆಯಲ್ಲಿ ವಾಸ್ತವ್ಯ ಮಾಡಲಿ. ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಒಳ್ಳೆಯ ಕಾರ್ಯಕ್ರಮವಾಗಿದೆ ಎಂದರು.
ಸದ್ಯ ಸಮಸ್ಯೆ ಅರಿಯಲು ಇದು ಉಪಯುಕ್ತ ಕಾರ್ಯವಾಗಿದೆ ಎಂಬುದು ನನ್ನ ವಯಕ್ತಿಯ ಸಲಹೆ ಎಂದು ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಮೊದಲು ಮುಖ್ಯಮಂತ್ರಿ ಆದ ನಂತರ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದರು. ಈ ಗ್ರಾಮವಾಸ್ತವ್ಯ ಪರಿಕಲ್ಪನೆ ಸಿಎಂಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅಲ್ಲದೇ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಸದ್ಯ ಸಿಎಂ ಮತ್ತೆ ಈ ಕಾರ್ಯಕ್ರಮವನ್ನು ಮುಂದುವರೆಸಲು ಮನಸು ಮಾಡಿದ್ದಾರೆ.