ಕ್ರೀಡೆ

ದಕ್ಷಿಣ ಆಫ್ರಿಕಾ ಅಪಾಯಕಾರಿ, ನನ್ನ ಗುರಿ ಗೆಲುವು ಮಾತ್ರ; ವಿರಾಟ್ ಕೊಹ್ಲಿ

Pinterest LinkedIn Tumblr


ಬೆಂಗಳೂರು: ಇಂದು ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್ ನಮಗೆ ಸವಾಲಾಗಿದೆ ಎಂದಿದ್ದಾರೆ.

‘ಈ ಬಾರಿಯ ವಿಶ್ವಕಪ್​ ಅನ್ನು ನಾವು ಹಗುರವಾಗಿ ಪರಿಗಣಿಸಿಲ್ಲ. ಎಲ್ಲಾ ತಂಡಗಳು ಬಲಿಷ್ಠವಾಗಿದೆ. 2017ರ ಚಾಂಪಿಯನ್ ಟ್ರೋಫಿಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡಿದ್ದೇವೆ. ದ. ಆಫ್ರಿಕಾ ಅತ್ಯಂತ ಅಪಾಯಕಾರಿ ತಂಡ. ಕೆಲ ಪ್ರಮುಖ ಆಟಗಾರರು ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿರುಬಹುದು, ಆದರೆ ತಂಡದ ಯುವ ಆಟಗಾರರನ್ನು ಕಡೆಗಣಿಸುವಂತಿಲ್ಲ. ನಾಳಿನ ಪಂದ್ಯವನ್ನು ನಾವು ನಿರ್ಲಕ್ಷಿಸುವುದಿಲ್ಲ’ ಎಂದು ಹೇಳಿದ್ದಾರೆ.

ಇನ್ನು ನಾನು ಬ್ಯಾಟ್ ಮಾಡಲು ಕ್ರಿಸ್​ಗೆ ಇಳಿದಾಗ ಅಭಿಮಾನಿಗಳು ನನ್ನಿಂದ ಶತಕವನ್ನು ನಿರೀಕ್ಷೆ ಮಾಡುತ್ತಾರೆ. ಆದರೆ, ನನ್ನ ಗುರಿ ಭಾರತದ ಗೆಲುವಿನ ಕಡೆ ಮಾತ್ರ. ಅದು 100, 60, 40 ರನ್​ಗಳಿಂದ ಆಗಿರಬಹುದು ಎಂದು ಹೇಳಿದ್ದಾರೆ.

ಇದರ ಜೊತೆಗೆ ಈ ಹಿಂದೆ ರಬಾಡ ಹೇಳಿರುವ ಮಾತಿಗೆ ಉತ್ತರಿಸಿದ ಕೊಹ್ಲಿ, ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಏನನ್ನು ಮಾತನಾಡಲು ನಾನು ಇಚ್ಚಿಸುವುದಿಲ್ಲ. ಈ ಬಗ್ಗೆ ಮಾತನಾಡಬೇಕು ಎಂದಿದ್ದರೆ, ಇಬ್ಬರು ಜೊತೆಯಾಗಿ ಎದುರು ಕೂತು ಮಾತನಾಡುತ್ತೇವೆ ಎಂದರು. (ಇತ್ತೀಚೆಗಷ್ಟೆ ದ. ಆಫ್ರಿಕಾ ತಂಡದ ಬೌಲರ್ ಕಗಿಸೊ ರಬಾಡ, ‘ಕೊಹ್ಲಿ ನಿಂದನೆಯನ್ನು ಸ್ವೀಕರಿಸಲು ತಯಾರಿಲ್ಲ. ಅವರೊಬ್ಬ ಪರಿಪಕ್ವವಲ್ಲದ ಆಟಗಾರ’ ಎಂಬ ಹೇಳಿಕೆ ನೀಡಿದ್ದರು).

Comments are closed.