ಕರ್ನಾಟಕ

ವಲಸಿಗರ ವಿರುದ್ಧ ಸಮರ ಸಾರಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ!!

Pinterest LinkedIn Tumblr


ಚುನಾವಣೆ ಮುಗಿದರೂ ಜೆಡಿಎಸ್​-ಕಾಂಗ್ರೆಸ್​ನಲ್ಲಿನ ಅಂತಃಕಲಹ ಕೊನೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಪಕ್ಷದ ವಿರುದ್ಧವೇ ಬಂಡೆದ್ದು ರಾಜೀನಾಮೆ ನೀಡಿದ ಬೆನ್ನಲ್ಲೆ, ಕಾಂಗ್ರೆಸ್ ಹಿರಿಯ ನಾಯಕರ ರಾಮಲಿಂಗಾ ರೆಡ್ಡಿ ಪಕ್ಷದ ಹಿರಿಯ ನಾಯಕರ ವಿರುದ್ಧ ತಿರುಗಿಬಿದ್ದಿದ್ದಾರೆ.

ಇದರೊಂದಿಗೆ ಕಾಂಗ್ರೆಸ್​ನಲ್ಲಿ ಮತ್ತೆ ವಲಸಿಗ – ಮೂಲನಿವಾಸಿಗಳ ನಡುವಿನ ಗುದ್ದಾಟ ಸ್ಫೋಟಗೊಂಡಂತಾಗಿದ್ದು, ಸ್ವಪಕ್ಷದ ನಾಯಕರ ವಿರುದ್ಧ ಮಾಜಿ ಸಚಿವ ರಾಮಲಿಂಗಾರೆಡ್ಡಿ ಗರಂ ಆಗಿದ್ದಾರೆ. ಸರಣಿ ಟ್ವೀಟ್​ ಮೂಲಕ ಅಸಮಾಧಾನ ಹೊರ ಹಾಕಿದ್ದದಾರೆ.

ಹೌದು ಕಾಂಗ್ರೆಸ್​ನ ಈ ಸ್ಥಿತಿಗೆ ವಲಸಿಗರಿಗೆ ಮಣೆ ಹಾಕಿದ್ದೇ ಕಾರಣ, ನಮ್ಮದೇ ಸರ್ಕಾರ ಇದ್ದರೂ ಕಾರ್ಯಕರ್ತರಲ್ಲಿ ಉತ್ಸಾಹವಿಲ್ಲ, ಮುಂಚೂಣಿ ನಾಯಕರು ಸಮಸ್ಯೆ ನಿರ್ವಹಿಸುವಲ್ಲಿ ವಿಫಲ ಎಂದು ಅವರು ಬಹಿರಂಗವಾಗಿಯೇ ಆಪಾದಿಸಿದ್ದಾರೆ. ಹಿರಿಯರು ನೀಡಿರೋ ಸಲಹೆ ತಿರಸ್ಕರಿಸಿರುವುದೇ ಪಕ್ಷದ ಹೀನಾಯ ಸೋಲಿಗೆ ಕಾರಣ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸರಿ ಇರಲ್ಲ ಎಂದು ಅವರು ಗುಡುಗಿದ್ದಾರೆ.

ಇನ್ನು ಯಾರ್ಯಾರನ್ನೋ ತಂದು ಸಚಿವರನ್ನಾಗಿ ಮಾಡಿದ್ದೀರಿ. ಅವರ ಸಾಧನೆ ಏನು ಅನ್ನೋದು ಗೊತ್ತಾಗಿದೆ. ಫಲಿತಾಂಶದಲ್ಲಿ ಎಡವಿದ ಸಚಿವರಿಗೆ ಪಕ್ಷದ ಕೆಲಸ ಕೊಡಿ, ಹಿರಿಯರಿಗೆ ಸಂಪುಟದಲ್ಲಿ ಸ್ಥಾನ ನೀಡಿ ಪಕ್ಷ ಉಳಿಸಿ ಎಂದು ರೆಡ್ಡಿ ವಾರ್ನಿಂಗ್ ಕೊಟ್ಟಿದ್ದಾರೆ.

ಈ ಕುರಿತು ರಾಮಲಿಂಗಾ ರೆಡ್ಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಂತೆ ಕಾಂಗ್ರೆಸ್ ಒಳಗೆ ಮತ್ತಷ್ಟು ಭಿನ್ನ ಮತಗಳು ಕೇಳಿಬರಲು ಆರಂಭಿಸಿದೆ. ಅಲ್ಲದೆ ಕೆಲವರು ರಾಮಲಿಂಗಾ ರೆಡ್ಡಿ ಬೆಂಬಲಕ್ಕೆ ನಿಂತಿರುವುದು ಪಕ್ಷದ ಹಿರಿಯ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Comments are closed.