ಕ್ರೀಡೆ

ಕೊಹ್ಲಿ ಕುರಿತು ದಕ್ಷಿಣ ಆಫ್ರಿಕಾ ಆಟಗಾರನ ಶಾಕಿಂಗ್​ ಸ್ಟೇಟ್​​ಮೆಂಟ್​​..!

Pinterest LinkedIn Tumblr


ನವದೆಹಲಿ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ 2019 ಇಂಗ್ಲೆಂಡ್​ನಲ್ಲಿ ಆರಂಭವಾಗಿರೋದು ಗೊತ್ತಿರುವ ವಿಷಯ. ಭಾರತ ವಿರುದ್ದ ದಕ್ಷಿಣ ಆಫ್ರಿಕಾ ತಂಡವು ಜೂನ್​ 5ರಂದು ಮುಖಾಮುಖಿ ಆಗಲಿವೆ. ಇದೇ ಬೆನ್ನಲೆ ಆಫ್ರಿಕಾ ತಂಡದ ಆಟಗಾರೊಬ್ಬರು ವಿರಾಟ್​ ಕೊಹ್ಲಿ ಅವರಿಗೆ ಪ್ರೌಢತೆಯ(Immature) ಕೊರತೆ ಇದೆ ಎಂದು ತಮ್ಮಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

ಇತ್ತೀಚಿಗೆ ಇಂಡಿಯನ್ ಪ್ರಿಮಿಯರ್ ಲೀಗ್​​ನಲ್ಲಿ ಆರ್​​ಸಿಬಿ ವಿರುದ್ಧ ಆಡುವಾಗ ವಿರಾಟ್​​ ಕೊಹ್ಲಿ ನಡೆದುಕೊಂಡ ಬಗ್ಗೆ ವೇಗಿ ಕಗಿಸೋ ರಬಡಾ ಬಹಿರಂಗಪಡಿಸಿದ್ದಾರೆ..

ಇದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮುಖಾಮುಖಿಯಾಗಿದಾಗ ನಾನು ಅವರಿಗೆ ಬೌಲಿಂಗ್​ ಮಾಡಿದ್ದೆ ನನ್ನ ಎಸೆತಕ್ಕೆ ಅವರು ಬೌಂಡರಿ ಸಹ ಬಾರಿಸಿದ್ದರು ಎಂದು ಕಗಿಸೋ ರಬಡಾ ಅವರು ಹೇಳಿಕೊಂಡಿದ್ದಾರೆ.

“ನಿಜಕ್ಕೂ, ನಾನು ಆಟದ ಬಗ್ಗೆ ಯೋಚನೆ ಮಾಡುತ್ತಿದ್ದೆ. ಆದರೆ ವಿರಾಟ್​, ನನ್ನ ಎಸೆತಕ್ಕೆ ಪ್ರತ್ಯುತ್ತರವಾಗಿ ಬೌಂಡರಿ ಬಾರಿಸಿದರು ಜತೆಗೆ ಅವರು ನನ್ನನ್ನು ನಿಂದಿಸಿದರು ಬಳಿಕ ನಾನು ಅವರಿಗೆ ಮರು ಉತ್ತರ ಕೊಟ್ಟಿದ್ದಕ್ಕೆ ಕೊಹ್ಲಿ ಕೋಪಗೊಂಡರು. ನನಗೆ ಅವರು ಇಷ್ಟ ಆಗುವುದಿಲ್ಲ” ಎಂದು ತಿಳಿಸಿದ್ದಾರೆ’

“ಬಹುಶಃ ಅವರು ಅದನ್ನು ಮಾಡುತ್ತಾರೆ ಏಕೆಂದರೆ ಅದು ಅವರ ಸ್ವಭಾವವಿರಬಹುದು. ಆದರೆ, ಅದು ನನಗೆ ತುಂಬಾ ಅಪಕ್ವತೆಯಾಗಿ ಕಂಡಿತು. ಅವರೊಬ್ಬ ಅತ್ಯುತ್ತಮ ಆಟಗಾರರು ಆದರೆ, ಅದನ್ನು ಅವರು ನಶೆಯಾಗಿ ತೆಗೆದುಕೊಳ್ಳಬಾರದು. ಅಂದು ಅವರು ನಡೆದುಕೊಂಡ ರೀತಿಯಿಂದ ನಾನು ಯಾವುದೇ ಗೊಂದಲಕ್ಕೆ ಒಳಗಾಗಿಲ್ಲ ಎಂದು ಇಎಸ್​​ಪಿಎನ್ ಮಾಧ್ಯಮದ ಜೊತೆ​​ ಹೇಳಿಕೊಂಡಿದ್ದಾರೆ.

Comments are closed.