ಮನೋರಂಜನೆ

ಗಿಲ್ಲಿ ಬೆಡಗಿ ಪೋಸ್ಟ್ ಮಾಡಿದ ಫೋಟೋ ಈಗ ನೆಟ್ಟಿಗರಿಗೆ ಚುಯಿಂಗ್ ಗಮ್

Pinterest LinkedIn Tumblr


ರಾಕುಲ್ ಪ್ರೀತ್ ಸಿಂಗ್.. ಪಡ್ಡೇ ಹೈಕ್ಳ ಪಾಲಿಗೆ ಚಂದ್ರಲೋಕದಿಂದ ಜಾರಿಬಂದ ಬೆಳದಿಂಗಳ ಬಾಳೆ ದಿಂಡು.. ರಾಕುಲ್ ಏನೇ ಮಾಡಿದ್ರು ನೋಡೇ ನೊಡುತ್ತೆ ಅಭಿಮಾನಿ ದಂಡು.. ಸೋಷಿಯಲ್ ಮೀಡಿಯಾದಲ್ಲಿ ರಾಕುಲ್ ಒಂದು ಫೋಟೋ ಹಾಕಿ ಟ್ರೋಲ್ ಹೈಕ್ಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಾಡೋದೆಲ್ಲ ಮಾಡಿ ಜಾಸ್ತಿ ಮಾತಾಡ ಬೇಡಿ ಅಂತ ವಾರ್ನಿಂಗೂ ಮಾಡಿದ್ದಾರೆ..

ಆಲ್ ಮೋಸ್ಟ್ ಆಲ್ ಟಾಲಿವುಡ್​ , ಕಾಲಿವುಡ್​ನ ಸ್ಟಾರ್ ಸಿನಿಮಾಗಳಲ್ಲಿ ರಾಕೂಲ್ ಪ್ರೀತ್ ಸಿಂಗ್ ತಮ್ಮ ಬೆಡಗು ಬಿನ್ನಾಣವನ್ನು ಪ್ರದರ್ಶಿಸಿದ್ದಾರೆ.. ಇಂತಿಪ್ಪ ಅಭಿನೇತ್ರಿ ಸೋಷಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡಿದ್ರು ಲಕ್ಷ ಲಕ್ಷ ಮಂದಿ ವಾವ್ , ಸೂಪರ್ , ಮಾರ್ವಲೆಸ್ , ಎಕ್ಸಾಸ್ಟ್ರಾಡ್ನರಿ ಎನ್ನುತ್ತಾರೆ.. ಆದ್ರೇ ಮೊನ್ನೆ ಇನ್ಸ್​ಸ್ಟಾದಲ್ಲಿ ಗಿಲ್ಲಿ ಬೆಡಗಿ ಪೋಸ್ಟ್ ಮಾಡಿದ ಒಂದು ಫೋಟೋ ಈಗ ನೆಟ್ಟಿಗರಿಗೆ ಚುಯಿಂಗ್ ಗಮ್ ಆಗಿದೆ..

ತೋಳಗಳ ಹತ್ತಿರ ನನ್ನನ್ನ ಬಿಟ್ಟರು ನಾನು ಧೈರ್ಯವಾಗಿ ಎದ್ದು ಬರುತ್ತೇನೆ ಅನ್ನೋ ಅರ್ಥದ ಅಡಿಬರಹದಲ್ಲಿ ಒಂದು ಫೋಟೋ ಹಾಕಿದ್ದಾರೆ ರಾಕುಲ್ ಪ್ರೀತ್ ಸಿಂಗ್​​.. ಪ್ಯಾಂಟ್ ಜಿಪ್​​ ಬಿಚ್ಚಿದಂತೆ ಮಾದಕವಾಗಿ ರಾಕುಲ್ ಪೋಸ್​​ ಕೊಟ್ಟಿರೋ ಈ ಫೋಟೋ ವೈರಲ್ ಆಗೋದ್ರ ಜೊತೆಗೆ ಅನೇಕ ಕಾಮೆಂಟ್​​ಗಳ ಸುರಿಮಳೆ ಈ ಪೋಟೋ ಮೇಲೆ ಜಿನಿಗಿದೆ..

80 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ರಾಕುಲ್ ಪ್ರೀತ್‌ಗೆ ಕಾಮೆಂಟ್​ಗಳು ತಲೆ ಕೆಡಿಸಿವೆ.. ಟ್ರೋಲ್ ಹೈದರ ಹಾವಳಿ ಸಿಟ್ಟು ಬರಿಸಿದೆ.. ಇದೇ ರೀತಿ ಮುಂದುವರೆಸಿದ್ರೆ ಸರಿ ಇರೋದಿಲ್ಲ ಎಂದು ಗುರ್​​ ಗುರ್ ಎಂದಿದ್ದಾರೆ ರಾಕುಲ್ ಪ್ರೀತ್.. ಆದ್ರೇ ನೆಟ್ಟಿಗರು ಯಾಕೆ ಇಂತಹ ಫೋಟೋ ಹಾಕಬೇಕು , ಟ್ರೋಲ್ ಹಕ್ಕಿಗಳ ಆಹಾರವಾಗಬೇಕು ಅಂತ ಮಾತನಾಡಿಕೊಳ್ಳುತ್ತಿದಾರೆ.

Comments are closed.