ಕ್ರೀಡೆ

ಡೆಲ್ಲಿ ವಿರುದ್ಧ ಸೋತು ಟೂರ್ನಿಯಿಂದ ಔಟ್ ಆದ ಹೈದರಾಬಾದ್ ; ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಕೋಚ್ ಟಾಮ್ ಮೂಡಿ

Pinterest LinkedIn Tumblr

ವಿಶಾಖಪಟ್ಟಣಂ: 12ನೇ ಆವೃತ್ತಿ ಐಪಿಎಲ್ ಟೂರ್ನಿಯಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊರಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ SRH ವಿರೋಚಿತ ಸೋಲು ಕಂಡಿದೆ. ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ SRH ಸೋಲಿಗೆ ಶರಣಾಗಿದೆ. ಡೆಲ್ಲಿ ವಿರುದ್ದ SRH ಸೋಲು ಕಾಣುತ್ತಿದ್ದಂತೆ ಡಗೌಟ್‌ನಲ್ಲಿ ಕುಳಿತಿದ್ದ ಕೋಚ್ ಟಾಮ್ ಮೂಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಕೀಮೊ ಪೌಲ್ ಬೌಂಡರಿ ಸಿಡಿಸುತ್ತಿದ್ದಂತೆ ಡೆಲ್ಲಿ ಗೆಲುವಿನ ಸಂಭ್ರಮ ಆಚರಿಸಿತು. ಆದರೆ SRH ಕೋಚ್ ಟಾಮ್ ಮೂಡಿಗೆ ನೋವು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಗೆಲುವಿಗೆ ಅತ್ಯತ್ತಮ ಅವಕಾಶ SRH ತಂಡಕ್ಕಿದ್ದರೂ ಫಲಿತಾಂಶ ಮಾತ್ರ ಭಿನ್ನವಾಗಿತ್ತು. ಟಾಮ್ ಮೂಡಿ ಬಿಕ್ಕಿ ಬಿಕ್ಕಿ ಅತ್ತ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು. ಇದಕ್ಕುತ್ತರವಾಗಿ ಡೆಲ್ಲಿ 19.5 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್, 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆದರೆ, ಹೈದರಾಬಾದ್ ಟೂರ್ನಿಯಿಂದ ಹೊರಬಿತ್ತು.

Comments are closed.