ರಾಷ್ಟ್ರೀಯ

ಸಾಧ್ವಿ ಪ್ರಗ್ಯಾ ಸಿಂಗ್ ಸೋಲಿಸಲು ಹಿಂದುತ್ವ, ಕೇಸರಿ ಮೊರೆ ಹೋದ ಕಾಂಗ್ರೆಸ್!

Pinterest LinkedIn Tumblr

ಹಿಂದುತ್ವವನ್ನೇ ತಮ್ಮ ಟ್ರಂಪ್ ಕಾರ್ಡ್ ಮಾಡಿಕೊಂಡ ನರೇಂದ್ರ ಮೋದಿ ಹಾಗೂ ಬಿಜೆಪಿ ದೇಶದ ಚುಕ್ಕಾಣಿ ಹಿಡಿದಿದ್ದರಿಂದ ಎಚ್ಚೇತ್ತಿರುವ ಕಾಂಗ್ರೆಸ್ ಇದೀಗ ಬಿಜೆಪಿಗೆ ಸೆಡ್ಡು ಹೊಡೆಯಲು ಹಿಂದುತ್ವ ಹಾಗೂ ಕೇಸರಿ ಮೊರೆ ಹೋಗುತ್ತಿದೆ.

ಹೌದು, ಮಧ್ಯಪ್ರದೇಶದ ಭೋಪಾಲ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಾಧ್ವಿ ಪ್ರಗ್ಯಾ ಸಿಂಗ್ ಸ್ಪರ್ಧಿಸುತ್ತಿದ್ದು ಪ್ರತಿ ಸ್ಪರ್ಧಿಯಾಗಿರುವ ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಠಾಕೂರ್ ಇದೀಗ ಬಿಜೆಪಿಯನ್ನು ಮಣಿಸಲು ಹಿಂದುತ್ವದ ಮೊರೆ ಹೋಗಿದ್ದು ನಿನ್ನೆ ನಡೆದ ರೋಡ್ ಶೋನಲ್ಲಿ ಎಲ್ಲೆಲ್ಲೂ ಕೇಸರಿ ಬಾವುಟಗಳು ರಾರಾಜಿಸಿದ್ದವು.

ದಿಗ್ವಿಜಯ್ ಸಿಂಗ್ ಅವರ ರೋಡ್ ಶೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಿಂದೂ ಮತಗಳನ್ನು ಸೆಳೆಯಲು ಕಾಂಗ್ರೆಸ್ ಕೇಸರಿ ಶಾಲನ್ನು ಹಂಚಿದೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

ಭೋಪಾಲ್ ಲೋಕಸಭೆ ಕ್ಷೇತ್ರಕ್ಕೆ ಮೇ 12ರಂದು ಮತದಾನ ನಡೆಯಲಿದ್ದು ಮೇ 23ರಂದು ಫಲಿತಾಂಶ ಹೊರಬೀಳಲಿದೆ.

ಒಟ್ಟಿನಲ್ಲಿ ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಮನಸ್ಥಿತಿಯಲ್ಲಿರುವ ಕಾಂಗ್ರೆಸ್ ಇದೀಗ ಹಿಂದುತ್ವದ ಟ್ರಂಪ್ ಕಾರ್ಡ್ ಬಳಸಲು ಮುಂದಾಗುತ್ತಿದೆ.

Comments are closed.