ಕ್ರೀಡೆ

ಪ್ಲೇ-ಆಫ್ ಪಂದ್ಯಗಳಿಗೆ ವೇದಿಕೆ ಸಿದ್ಧ; ಮುಂಬೈ, ಚೆನ್ನೈ, ಡೆಲ್ಲಿ, ಹೈದರಾಬಾದ್ ಪ್ಲೇ-ಆಫ್‌ಗೆ; ಸಂಪೂರ್ಣ ವೇಳಾಪಟ್ಟಿ ಇಂತಿದೆ

Pinterest LinkedIn Tumblr

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ಕೊನೆಯ ರೋಚಕ ಹಂತವನ್ನು ತಲುಪಿದ್ದು, ಪ್ಲೇ-ಆಫ್ ಪಂದ್ಯಗಳಿಗೆ ವೇದಿಕೆ ಸಿದ್ಧಗೊಂಡಿದೆ.

ಎಲ್ಲ ಎಂಟು ತಂಡಗಳು ತಲಾ 14 ಪಂದ್ಯಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿಯ ಬಳಿಕವೀಗ ಪ್ಲೇ-ಆಫ್ ಹಂತಕ್ಕೆ ಅಗ್ರ ನಾಲ್ಕು ತಂಡಗಳು ಪ್ರವೇಶಿಸಿದೆ. ಇದರೊಂದಿಗೆ ಪ್ಲೇ-ಆಫ್ ಹಣಾಹಣಿಗೆ ವೇಳಾಪಟ್ಟಿ ಸಜ್ಜುಗೊಂಡಿದೆ.

ಪ್ಲೇ-ಆಫ್ ಪ್ರವೇಶಿಸಿದ ತಂಡಗಳು:
1.ಮುಂಬೈ ಇಂಡಿಯನ್ಸ್
2. ಚೆನ್ನೈ ಸೂಪರ್ ಕಿಂಗ್ಸ್
3. ಡೆಲ್ಲಿ ಕ್ಯಾಪಿಟಲ್ಸ್
4. ಸನ್‌ರೈಸರ್ಸ್ ಹೈದರಾಬಾದ್

ಐಪಿಎಲ್ 2019ರಿಂದ ಹೊರಬಿದ್ದಿರುವ ತಂಡಗಳು:
1. ಕೋಲ್ಕೊತಾ ನೈಟ್ ರೈಡರ್ಸ್
2. ಕಿಂಗ್ಸ್ ಇಲೆವೆನ್ ಪಂಜಾಬ್
3. ರಾಜಸ್ಥಾನ್ ರಾಯಲ್ಸ್
4. ರಾಯಲ್ ಚಾಲೆಂಜರ್ಸ್ ಬೆಂಗಳೂರು.

ಕ್ವಾಲಿಫೈಯರ್ ಪಂದ್ಯಗಳ ವೇಳಾಪಟ್ಟಿ ಇಂತಿದೆ:

ಮೇ 7, ಮಂಗಳವಾರ, ಕ್ವಾಲಿಫೈಯರ್ 1: ಮುಂಬೈ vs ಚೆನ್ನೈ ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ
ಮೇ 8, ಬುಧವಾರ: ಎಲಿಮಿನೇಟರ್: ಡೆಲ್ಲಿ vs ಹೈದರಾಬಾದ್, ತಾಣ: ವಿಶಾಖಪಟ್ಟಣ, ಸಮಯ: ರಾತ್ರಿ 7.30ಕ್ಕೆ
ಮೇ 10, ಶುಕ್ರವಾರ: ಕ್ವಾಲಿಫೈಯರ್ 2: ಕ್ವಾಲಿಫೈಯರ್ 1 ಸೋತ ತಂಡ vs ಎಲಿನೇಟರ್ ವಿಜೇತ ತಂಡ, ತಾಣ: ವಿಶಾಖಪಟ್ಟಣ, ಸಮಯ: ರಾತ್ರಿ 7.30ಕ್ಕೆ

ಮೇ 12, ಭಾನುವಾರ: ಫೈನಲ್, ಕ್ವಾಲಿಫೈಯರ್ 1 ವಿಜೇತ ತಂಡ vs ಕ್ವಾಲಿಫೈಯರ್ 2 ವಿಜೇತ ತಂಡ, ತಾಣ: ಹೈದರಾಬಾದ್, ಸಮಯ: ರಾತ್ರಿ 7.30ಕ್ಕೆ

Comments are closed.