ಕ್ರೀಡೆ

ಆರ್‌ಸಿಬಿಯ ಪ್ಲೇ-ಆಫ್ ಕನಸು ಬಹುತೇಕ ಭಗ್ನ; ಡೆಲ್ಲಿ ಕ್ಯಾಪಿಟಲ್ 16 ರನ್ ಅಂತರದ ಜಯ

Pinterest LinkedIn Tumblr

ನವದೆಹಲಿ: ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಹೈವೋಲ್ಟೇಕ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ವಿರುದ್ಧ 16 ರನ್ ಅಂತರದ ಜಯ ಸಾಧಿಸಿದೆ.

ಈ ಸೋಲಿನೊಡನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ-ಆಫ್ ಕನಸು ಬಹುತೇಕ ಭಗ್ನಗೊಂಡಂತಾಗಿದೆ. ಇನ್ನೊಂದೆಡೆ ಚೆನ್ನೈ ಬಳಿಕ ಡೆಲ್ಲಿ ಪ್ಲೇ-ಆಫ್ ಹಾದಿ ಸುಗಮವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ನಿಡಿದ್ದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಬೆಂಗಳೂರು ತಂಡದ ಪರ ಪಾರ್ಥಿವ್ ಪಟೇಲ್(39) ಹಾಗೂ ನಾಯಕ ಕೊಹ್ಲಿ (23) ಉತ್ತಮ ಪ್ರಾರಂಭ ನೀಡಿದ್ದರು.

ಆ ನಂತರ ಕ್ರೀಸ್ ಗಿಳಿದ ಎಬಿ ಡಿ ವಿಲಿಯರ್ಸ್(17), ಶಿವಂ ದುಬೆ (24), ಹೆನ್ರಿಚ್ ಕ್ಲಾಸೆನ್ (3), ಗುರ್‌ಕೀರಾತ್ ಸಿಂಗ್ ಮನ್ (27) ಮಾರ್ಕಸ್ ಸ್ಟೋಯ್ನಿಸ್ (32*) ರನ್ ಸಿಡಿಸಿದ್ದರು ಇದರೊಡನೆ ಬೆಂಗಳುರು ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಡೆಲ್ಲಿ ಪರ ರಬಡ ಹಾಗೂ ಮಿಶ್ರಾ ತಲಾ ಎರಡು ವಿಕೆಟ್ ಪಡೆದರೆ ಇಶಾಂತ್ ಶರ್ಮಾ, ಅಕ್ಸರ್ ಪಟೇಲ್, ರುಥ್ ಫೋರ್ಡ್ ತಲಾ ಒಂದೊಂದು ವಿಕೆಟ್ ಪಡೆಇದ್ದರು.

Comments are closed.