ಕ್ರೀಡೆ

ಮುಂಬೈ ತಂಡವನ್ನು 34 ರನ್ ಗಳ ಅಂತರದಿಂದ ಮಣಿಸಿದ ಕೋಲ್ಕತ್ತಾ; ಹಾರ್ದಿಕ್ ಪಾಂಡ್ಯ ಹೋರಾಟ ವ್ಯರ್ಥ

Pinterest LinkedIn Tumblr

ಐಪಿಎಲ್ ನ 12 ನೇ ಆವೃತ್ತಿಯ 47 ನೇ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಮುಂಬೈ ತಂಡವನ್ನು 34 ರನ್ ಗಳ ಅಂತರದಿಂದ ಮಣಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡದ ವಿರುದ್ಧ ಕೋಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತು.

ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಲ್ಕತ್ತಾ ತಂಡ ರೋಹಿತ್ ಶರ್ಮಾ ಕ್ವಿನ್ಟನ್ ಡೆ ಕಾಕ್ ವಿಕೆಟ್ ಪಡೆದ ಆರಂಭಿಕ ಅಘಾತ ನೀಡಿದರು.

ಹಾರ್ದಿಕ್ ಪಾಂಡ್ಯ 34 ಎಸೆತಗಳಲ್ಲಿ 91 ರನ್ ಗಳಿಸುವ ಮೂಲಕ ಮುಂಬೈ ತಂಡದ ಗೆಲುವಿನ ಆಸೆ ಚಿಗುರುವಂತೆ ಮಾಡಿದರಾದರೂ ಏಕಾಂಗಿ ಹೋರಾಟ ವ್ಯರ್ಥವಾಗಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ವಿರುದ್ಧ 7ವಿಕೆಟ್ ನಷ್ಟಕ್ಕೆ ಮುಂಬೈ ತಂಡ 198 ಗಳನ್ನು ದಾಖಲಿಸಿ ಸೋಲೊಪ್ಪಿಕೊಂಡಿತು.

ಈ ಗೆಲುವಿನ ಮೂಲಕ ಕೋಲ್ಕತ್ತಾ ತಂಡ 10 ಪಾಯಿಂಟ್ ಗಳನ್ನು ಗಳಿಸುವ ಮೂಲಕ 5 ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಕನಸನ್ನು ಉಳಿಸಿಕೊಂಡಿದೆ.

Comments are closed.