ಕ್ರೀಡೆ

ಅಮೆರಿಕ ಕ್ರಿಕೆಟ್ ತಂಡ ಇದೇ ಮೊದಲ ಬಾರಿಗೆ ಏಕದಿನ ಮಾನ್ಯತೆ!

Pinterest LinkedIn Tumblr


ವಿಂದೊಕ್: ಅಮೆರಿಕ ಕ್ರಿಕೆಟ್ ತಂಡ ಇದೇ ಮೊದಲ ಬಾರಿಗೆ ಏಕದಿನ ಮಾನ್ಯತೆ ಪಡೆದುಕೊಂಡಿದೆ. ನಮೀಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2 ಟೂರ್ನಿಯಲ್ಲಿ ಸತತ 3ನೇ ಗೆಲುವು ಸಾಧಿಸುವ ಮೂಲಕ ಐಸಿಸಿ ಮಾನ್ಯತೆ ಪಡೆದುಕೊಂಡಿದೆ.

6 ತಂಡಗಳ ಲೀಗ್‌ನಲ್ಲಿ ಅಮೇರಿಕ 4ನೇ ಸ್ಥಾನ ಪಡೆದಿದೆ. ಅಗ್ರ 4 ಸ್ಥಾನ ಗಿಟ್ಟಿಸಿಕೊಂಡಿರುವ ತಂಡಗಳಿಗೆ ಏಕದಿನ ಸ್ಥಾನಮಾನ ನೀಡಲಾಗಿದೆ. ವೆಸ್ಟ್ ಇಂಡೀಸ್ ಮಾಜಿ ಬ್ಯಾಟ್ಸ್‌ಮನ್ ಕ್ಸೇವಿಯರ್ ಮಾರ್ಷಲ್ ಶತಕದ ನೆರವಿನಿಂದ ಅಮೆರಿಕಾ 8 ವಿಕೆಟ್ ನಷ್ಟಕ್ಕೆ 280 ರನ್ ಸಿಡಿಸಿತ್ತು. ಈ ಗುರಿ ಬೆನ್ನತ್ತಿದ ಹಾಂಕಾಗ್ 7 ವಿಕೆಟ್ ನಷ್ಟಕ್ಕೆ 196 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.

ಓಮಾನ್ ತಂಡ ಕೂಡ ಏಕದಿನ ಸ್ಥಾನಮಾನ ಪಡೆದುಕೊಂಡಿದೆ. ಉಳಿದ 2 ಸ್ಥಾನಕ್ಕಾಗಿ ನಮೀಬಿಯಾ, ಪಪುಪಾ ನ್ಯೂ ಗಿನಿಯಾ, ಕೆನಡಾ ಹಾಗೂ ಹಾಂಕಾಂಗ್ ಸ್ಪರ್ಧಿಸುತ್ತಿದೆ. 2004ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಏಕದಿನ ಪಂದದ್ಯ ಆಡಿದ್ದ ಅಮೆರಿಕಾ, ಹಾಂಕಾಂಗ್ ವಿರುದ್ಧ ಸೋಲು ಕಂಡಿತ್ತು.

Comments are closed.