ರಾಷ್ಟ್ರೀಯ

ವಾರಾಣಸಿಯಲ್ಲಿ ಮೋದಿ 6 ಕಿ.ಮೀ ರೋಡ್ ಶೋ

Pinterest LinkedIn Tumblr


ನವದೆಹಲಿ: ಉತ್ತರಪ್ರದೇಶದ ವಾರಾಣಸಿ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ಕಾಶಿ ವಿಶ್ವನಾಥನ ಕ್ಷೇತ್ರವಾದ ವಾರಾಣಸಿಯಲ್ಲಿ ಮೆಗಾ ರೋಡ್ ಶೋ ಆರಂಭಿಸಿದ್ದಾರೆ. ಲಂಕಾ ಗೇಟ್ ನಿಂದ ಗಂಗಾ ಘಾಟ್ ವರೆಗೆ ರೋಡ್ ಶೋ ನಡೆಯಲಿದೆ.

ಬಿಗಿ ಭದ್ರತೆಯಲ್ಲಿ ಆಗಮಿಸಿದ ಪ್ರಧಾನಿ ಮೋದಿ ಅವರು ಬನಾರಸ್ ಹಿಂದೂ ಯೂನಿರ್ವಸಿಟಿಯ (ಬಿಎಚ್ ಯು) ಸಂಸ್ಥಾಪಕ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ವಾರಾಣಸಿಯ ಮಾರ್ಗದ ಮೂಲಕ ಸುಮಾರು ಆರು ಕಿಲೋ ಮೀಟರ್ ದೂರದವರೆಗೆ ರೋಡ್ ಶೋ ನಡೆಯಲಿದೆ.

ರಸ್ತೆಯ ಇಕ್ಕೆಲ ಸೇರಿದಂತೆ ರೋಡ್ ಶೋನಲ್ಲಿ ಸಾಗರೋಪಾದಿಯಲ್ಲಿ ಜನರು ಸೇರಿದ್ದು, ಮೋದಿ, ಮೋದಿ ಎಂದು ಜಯಘೋಷ ಕೂಗುತ್ತಿದ್ದಾರೆ. ಅಷ್ಟೇ ಅಲ್ಲ ಮೋದಿ ವಾಹನದ ಮೇಲೆ ಗುಲಾಬಿ ಹೂವನ್ನು ಎರಚಿ ಅಭಿಮಾನ ಮೆರೆಯುತ್ತಿದ್ದಾರೆ.

ಅಸ್ಸಿ, ಭಾಂದಿನಿ, ಸೋನಾಪುರ್, ಮದನ್ ಪುರಾ, ಗೋಡೋವಿಲ್ಲಾ ಮಾರ್ಗದ ಮೂಲಕ ಸಾಗಲಿದ್ದು, ನಂತರ ದಶಾಶ್ವಮೇಧ ಘಾಟ್ ನಲ್ಲಿ ಸಂಜೆಯ ವೇಳೆಗೆ ಮೋದಿ ಅವರು ಗಂಗಾ ಆರತಿ ನಡೆಸಲಿದ್ದಾರೆ. ಏಪ್ರಿಲ್ 26ರಂದು ಪ್ರಧಾನಿ ಮೋದಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ.

Comments are closed.