ಕ್ರೀಡೆ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೋನು ಕುಮಾರ್ ತಲೆಗೆ ಕಿಸ್ ಕೊಟ್ಟ ಧೋನಿ ಪತ್ನಿ ಹೇಳಿದ್ದೇನು…?

Pinterest LinkedIn Tumblr

ಚೆನ್ನೈ: ಸಾಕ್ಷಿ ಧೋನಿ ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೋನು ಕುಮಾರ್ ರೊಂದಿಗೆ ಇರುವ ಫೋಟೋ ಪೋಸ್ಟ್ ಮಾಡಿ ಕಾಲೆಳೆದಿದ್ದಾರೆ. ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಸಾಕ್ಷಿ ಧೋನಿ ಫೋಟೋ ಪೋಸ್ಟ್ ಮಾಡಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಬಂಜರು ಭೂಮಿ.. ಹಸಿರಿಗಾಗಿ ಎದುರು ನೋಡುತ್ತಿದೆ.. ಹುಲ್ಲು ಈ ಭಾಗದಲ್ಲಿ ಹಸಿರಾಗಿ ಇಲ್ಲ…’ ಎಂದು ಸಾಕ್ಷಿ ಸಿಂಗ್, ಮೋನು ಕುಮಾರ್ ಕಾಲೆಳೆದಿದ್ದು, ಅವರ ತಲೆ ಮೇಲೆ ಕಿಸ್ ಮಾಡುತ್ತಿರುವ ಫೋಟೋವನ್ನು #bepositivealways ಹ್ಯಾಶ್ ಟ್ಯಾಗ್‍ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತ ಸಾಕ್ಷಿ ಧೋನಿ ಪೋಸ್ಟ್ ಬಗ್ಗೆ ಸಾಕಷ್ಟು ಮಂದಿ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು, ತಮಗೇ ಈ ಪೋಸ್ಟ್‍ನಿಂದ ನೋವಾಗಿದೆ. ನೀವು ಈ ರೀತಿ ನಮ್ಮನ್ನು ನೋವು ಪಡುವಂತೆ ಮಾಡುವುದು ಸರಿಯಲ್ಲ. ನಿಮ್ಮನ್ನು ನಾನು ಆನ್ ಫಾಲೋ ಮಾಡುತ್ತಿದ್ದೇವೆ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ಕೆಲವರು ಸಾಕ್ಷಿ ಅವರ ಪೋಸ್ಟ್ ಪರ ನಿಂತಿದ್ದು, ಫ್ಲಾಟ್ ಫಿಚ್ ಚೆನ್ನಾಗಿದ್ದು ಬ್ಯಾಟಿಂಗ್ ಮಾಡಲು ಉತ್ತಮವಾಗಿರುತ್ತದೆ ಎಂದು ಮೋನು ಕುಮಾರ್ ಅವರನ್ನು ಮತ್ತೊಮ್ಮೆ ಕಾಲೆಳೆದಿದ್ದಾರೆ. ಇತ್ತ ಕೆಲ ದಿನಗಳ ಹಿಂದೆ ಸಾಕ್ಷಿ ಧೋನಿ ಅವರೊಂದಿನ ಫೋಟೋ ಪೋಸ್ಟ್ ಮಾಡಿದ್ದ ಮೋನು ಸಿಂಗ್, ಪ್ರಪಂಚದಲ್ಲೇ ಅತ್ಯುತ್ತಮ ಅತ್ತಿಗೆ ಎಂದು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಹೊಗಳಿದ್ದರು.

Comments are closed.