ಕ್ರೀಡೆ

ಐಪಿಎಲ್ ನಲ್ಲಿ 300 ಸಿಕ್ಸ್ ಬಾರಿಸಿ ಹೊಸ ದಾಖಲೆ ಬರೆದ ಕ್ರಿಸ್ ಗೇಲ್

Pinterest LinkedIn Tumblr


ಮೊಹಾಲಿ: ಸಿಕ್ಸ್​ರ್​ ಸರದಾರ ಎಂದೇ ಖ್ಯಾತಿ ಪಡೆದಿರುವ ವೆಸ್ಟ್ಇಂಡೀಸ್ ದಾಂಡಿಗ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು ಶನಿವಾರ 300ನೇ ಸಿಕ್ಸ್ ಸಿಡಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದಿ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.
ಇಂದು ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ.
ವಿಶ್ವ ಟಿ20, ಏಕದಿನ ಹಾಗೂ ಟೆಸ್ಟ್​ ಇತಿಹಾಸದಲ್ಲಿ ಸಿಕ್ಸರ್​ ದಾಖಲೆ ಬರೆದಿರುವ ಗೇಲ್​ ಇದೀಗ ಐಪಿಎಲ್ ನಲ್ಲೂ ಹೊಸ ದಾಖಲೆ ಬರೆದಿದ್ದು, ಕ್ರಿಕೆಟ್​ ಇತಿಹಾಸದಲ್ಲಿ ನಾನೇ ಯೂನಿವರ್ಸಲ್​ ಬಾಸ್​ ಎಂಬ ತಮ್ಮ ಹೇಳಿಕೆ ನಿರೂಪಿಸಿದ್ದಾರೆ.
ಮುಂಬೈ ನೀಡಿರುವ 176 ರನ್​ ಗುರಿ ಬೆನ್ನತ್ತಿರುವ ಪಂಜಾಬ್​ಗೆ ಗೇಲ್​ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಮಿಚೆಲ್​ ಮೆಕ್ಲೆಹೆಂಗನ್​ ಎಸೆದ ಮೂರನೇ ಓವರ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಎರಡು ಸಿಕ್ಸರ್​ ಸಿಡಿಸುವ ಮೂಲಕ 300 ಸಿಕ್ಸರ್​ ಗಡಿಯನ್ನು ಮುಟ್ಟಿ ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದಿ ಮೊದಲಿಗ ಎನಿಸಿಕೊಂಡಿದ್ದಾರೆ.
ಎರಡನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್​ ಇದ್ದು, 143 ಪಂದ್ಯಗಳಲ್ಲಿ 192 ಸಿಕ್ಸರ್​ ಸಿಡಿಸಿದ್ದಾರೆ, 187 ಸಿಕ್ಸರ್​ ಮೂಲಕ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

Comments are closed.