ಕ್ರೀಡೆ

ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಆರೋಪ: ಮೊಹಮ್ಮದ್ ಶಮಿ ವಿರುದ್ಧ ಚಾರ್ಜ್‍ಶೀಟ್ ದಾಖಲು

Pinterest LinkedIn Tumblr


ಕೋಲ್ಕತ್ತಾ: ಲೈಂಗಿಕ ದೌರ್ಜನ್ಯ ಹಾಗೂ ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿರುವ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಕೋಲ್ಕತ್ತಾ ಪೊಲೀಸರು ಚಾರ್ಜ್‍ಶೀಟ್ ದಾಖಲಿಸಿದ್ದಾರೆ.

ವಿಶ್ವಕಪ್ ಟೂರ್ನಿಗೆ ಕೆಲ ಸಮಯ ಬಾಕಿ ಇರುವ ವೇಳೆಯಲ್ಲೇ ಶಮಿ ವಿರುದ್ಧ ಚಾರ್ಜ್‍ಶೀಟ್ ದಾಖಲಾಗಿರುವುದಿಂದ ಶಮಿ ವಿಶ್ವಕಪ್ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಶಮಿ ಪತ್ನಿ ಹಸಿನ್ ಜಹಾನ್ ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 7 ಲಕ್ಷ ರೂ. ಕೋರಿ ಮನವಿ ಸಲ್ಲಿಸಿದ್ದಾರೆ. ಜಾಹನ್ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ ಮಗಳ ಜೀವನಕ್ಕಾಗಿ 80 ಸಾವಿರ ರೂ. ನೀಡುವಂತೆ ತಿಳಿಸಿತ್ತು. ಗುರುವಾರ ಶಮಿ ಹಾಗೂ ಅವರ ಕುಟುಂಬ ಮೇಲೆ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 254ಎ (ಲೈಂಗಿಕ ದೌರ್ಜನ್ಯ) ಸೆಕ್ಷನ್ ಅಡಿ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ಶಮಿ ಅವರ ವಿರುದ್ಧ ಪತ್ನಿ ಜಹಾನ್ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡ ಮಾಡಿದ್ದರು. ಅಲ್ಲದೇ ಈ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಶಮಿ ಬೇರೆ ಬೇರೆ ಮಹಿಳೆಯರೊಂದಿಗೆ ಇದ್ದ ಫೋಟೋ ಹಾಗೂ ಚಾಟ್ ಮಾಡಿದ್ದ ಸ್ಕ್ರಿನ್ ಶಾರ್ಟ್ ಗಳನ್ನು ಪೋಸ್ಟ್ ಮಾಡಿದ್ದರು. ಅಲ್ಲದೇ ಸಹೋದರನೊಂದಿಗೆ ಸಂಬಂಧ ಹೊಂದುವಂತೆ ಶಮಿ ಒತ್ತಡ ಹಾಕಿದ್ದರು ಎಂದು ಜಹಾನ್ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ ಈ ಎಲ್ಲಾ ಆರೋಪಗಳನ್ನು ಶಮಿ ನಿರಾಕರಿಸಿದ್ದರು.

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶಮಿ ಆಸೀಸ್ ವಿರುದ್ಧ ಆಡಿದ್ದರು. 9 ಓವರ್ ಬೌಲ್ ಮಾಡಿದ್ದ ಶಮಿ 57 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡು ಮುಖಭಂಗ ಅನುಭವಿಸಿತ್ತು.

Comments are closed.