ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಕೈಕೊಟ್ಟ ಬೌಲರ್ಸ್, ಪಂತ್ ವಿರುದ್ಧ ಗುಡುಗಿದ ಕೊಹ್ಲಿ !

Pinterest LinkedIn Tumblr

ವಿಶ್ವಕಪ್ ಟೂರ್ನಿಗೆ ಪೂರ್ವಭಾವಿ ಹೆಚ್ಚು ಮಹತ್ವ ಪಡೆದಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು. ಒಂದೊಂದು ಪಂದ್ಯದಲ್ಲಿ ಬ್ಯಾಟ್ಸ್ ಮನ್ ಹಾಗೂ ಮಗದೊಂದು ಪಂದ್ಯದಲ್ಲಿ ಬೌಲರ್ಸ್ ಗಳು ಕೈ ಕೊಡುತ್ತಿರುವುದರಿಂದ ತಂಡಕ್ಕೆ ಹಿನ್ನಡೆಯಾಗುತ್ತಿದೆ.

ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ 359 ರನ್ ಗಳ ಬೃಹತ್ ಮೊತ್ತ ನೀಡಿದ್ದರು. ಸಹ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳ ಅತ್ಯುತ್ತಮ ಬ್ಯಾಟಿಂಗ್ ನಿಂದಾಗಿ ತಂಡ ಇನ್ನು 13 ಎಸೆತ ಬಾಕಿ ಇರುವಂತೆ 4 ವಿಕೆಟ್ ಗಳಿಂದ ರೋಚಕ ಗೆಲುವು ಸಾಧಿಸಿತು.

ಇದನ್ನು ನೋಡುತ್ತಿದ್ದರೆ ಈ ಬಾರಿಯ ವಿಶ್ವಕಪ್ ನಲ್ಲಿ ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿರುವ ಟೀಂ ಇಂಡಿಯಾ ಈ ಸೋಲುಗಳಿಂದ ಚಿಂತೆಗೀಡಾಗುವಂತೆ ಮಾಡಿದೆ.

ನಾಲ್ಕನೇ ಪಂದ್ಯ ಸೋಲಿಗೆ ಕಾರಣಗಳು
ದುಬಾರಿಯಾದ ಬೌಲರ್ಸ್ ಗಳು
ಟೀಂ ಇಂಡಿಯಾದಲ್ಲಿ ವೇಗಿಗಳು ಸಾಕಷ್ಟು ಪ್ರಯತ್ನ ಪಟ್ಟರು ಸಹ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ವಿಫಲರಾಗಿದ್ದಾರೆ. ಹೌದು ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಕೇದಾರ್ ಜಾದವ್ ಹೆಚ್ಚು ರನ್ ನೀಡಿ ದುಬಾರಿ ಬೌಲರ್ಸ್ ಎನಿಸಿಕೊಂಡಿದ್ದಾರೆ.

ವಿಕೆಟ್ ಹಿಂದೆ ಪರದಾಡಿದ ರಿಷಬ್ ಪಂತ್
ಟೀಂ ಇಂಡಿಯಾದ ಭವಿಷ್ಯದ ವಿಕೆಟ್ ಕೀಪರ್ ಎಂದೇ ಬಿಂಬಿತರಾಗಿರುವ ರಿಷಬ್ ಪಂತ್ ನಿನ್ನೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಸಹ ವಿಕೆಟ್ ಹಿಂದೆ ಕ್ಯಾಚ್ ಹಾಗೂ ಸ್ಟಂಪ್ ಔಟ್ ಗಳನ್ನು ಮಾಡುವಲ್ಲಿ ವಿಫಲರಾಗಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಬ್ಯಾಕ್ ಟು ಬ್ಯಾಕ್ ಸ್ಟಂಪ್ ಔಟ್ ಮೀಸ್ ಮಾಡಿದ್ದು ನಾಯಕ ಕೊಹ್ಲಿ ಆಕ್ರೋಶಕ್ಕೆ ಕಾರಣವಾಯಿತು.

ಕಳಪೆ ಫೀಲ್ಡಿಂಗ್‌
ಒಂದು ಹಂತದಲ್ಲಿ ಟೀಂ ಇಂಡಿಯಾಗೆ ಗೆಲುವಿನ ಅವಕಾಶಗಳು ಸಾಕಷ್ಟಿದ್ದರು. ಅದನ್ನು ತಂಡದ ಆಟಗಾರರು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೌದು ಕೈಗೆ ಬಂದ ಕ್ಯಾಚ್ ಗಳನ್ನು ಕೈಚೆಲ್ಲುವ ಮೂಲಕ ತಂಡದ ಆಟಗಾರರು ಮತ್ತೆ ದುಬಾರಿಯಾಗಿದ್ದಾರೆ.

ಒಟ್ಟಿನಲ್ಲಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಟೀಂ ಇಂಡಿಯಾ ನಂತರದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು ಸದ್ಯ ಉಭಯ ತಂಡಗಳು ಟೂರ್ನಿಯಲ್ಲಿ ಸಮಬಲ ಸಾಧಿಸಿದ್ದು 13ರಂದು ನಡೆಯಲಿರುವ ಪಂದ್ಯದ ಸರಣಿ ನಿರ್ಣಾಯಕ ಪಂದ್ಯವಾಗಲಿದೆ.

Comments are closed.